ಬೆಂಗಳೂರು[ಜು. 22] ಸಮಯ ರಾತ್ರಿ 10.30 ಮೀರಿದೆ. ಆದರೆ ನಮ್ಮ ನಾಯಕರಿಗೆ, ವಿಧಾನಸೌಧಲ್ಲಿ ರಾಜ್ಯದ ಒಳಿತಿಗೆ ಚರ್ಚೆ ಮಾಡುತ್ತಿರುವವರಿಗೆ ರಾತ್ರಿಯ ಊಟ ಆಗಿಲ್ಲ. ಹೌದು ಅದೇ ಕಾರಣಕ್ಕೆ ಊಟಕ್ಕೆಂದು ಕೆಲ ನಾಯಕರು ಎದ್ದು ಹೋಗಿದ್ದಾರೆ. 

ವಿಧಾನಸೌಧದ ಅಕ್ಕ ಪಕ್ಕದ ಕ್ಯಾಂಟೀನ್ ಗಳು ಕ್ಲೋಸ್ ಆಗಿವೆ. ಹತ್ತಿರದಲ್ಲಿ ಯಾವ ಹೋಟೆಲ್ ನಿಂದ ಊಟ ತರಿಸಬೇಕು ಎಂದು ಅಧಿಕಾರಿಗಳು ಮಾಹಿತಿ ಕಲೆ ಹಾಕುತ್ತಿದ್ದಾರೆ. ಸಿಎಂ ಕುಮಾರಸ್ವಾಮಿ ಸ್ಥಾನದಿಂದ ಎದ್ದು ಹೋಗಿದ್ದು ಬಿಜೆಪಿಯವರು ರಾತ್ರಿ ಒಂದು ಗಂಟೆಯಾದರೂ ಸರಿ ಇವತ್ತೆ ಮುಗಿಸಿ ನಮಗೆ ಊಟ ಬೇಡ ಎಂದು ಕುಳಿತುಕೊಂಡಿದ್ದಾರೆ.

ನಾನು JDS ಬಿಟ್ಟಿದ್ದೇಕೆ? ಸದನದಲ್ಲಿ ಸಿದ್ದರಾಮಯ್ಯ ಹೇಳಿದ ಇತಿಹಾಸದ ಗುಟ್ಟು

ವಿಶ್ವಾಸಮತ ಯಾಚನೆಯ ಗಲಾಟೆ-ಗೊಂದಲಗಳು ನಡೆಯುತ್ತಿದ್ದರೂ ಜೆಡಿಎಸ್ ಹಿರಿಯ ನಾಯಕ ಎಚ್‌.ಡಿ.ರೇವಣ್ಣ ಮಾತ್ರ ಗಢದ್ದಾಗಿ ನಿದ್ದೆ ಮಾಡುತ್ತಿರುವುದು ಕಂಡು ಬಂತು.