ನಾನು ಜೆಡಿಎಸ್ ಬಿಡಲಿಲ್ಲ ಅಲ್ಲಿಂದ ನನ್ನನ್ನು ಉಚ್ಛಾಟನೆ ಮಾಡಿರು. ಮೊದಲು ಫ್ಯಾಕ್ಟ್ಸ್ ತಿಳಿದುಕೊಂಡು ಮಾತನಾಡಿ ಎಂದು ಬಿಜೆಪಿಯ ಸಿಟಿ ರವಿಗೆ ಹೇಳುವ ಮೂಲಕ ಮಾಜಿ ಸಿಎಂ ಮತ್ತೆ ತಮ್ಮ ಹಳೆಯ ರಾಜಕೀಯ ಜೀವನದ ಕತೆ ಹೇಳಿದರು. ಉಚ್ಛಾಟನೆಯಾದ ನಂತರ ನಾನು ನೇರವಾಗಿ ಕಾಂಗ್ರೆಸ್ ಸೇರಿಲ್ಲ. ಹಿಂದ ಸಂಘಟನೆ ಮಾಡಿಕೊಂಡು ಬಂದಿದ್ದೆ. ಅದಾದ ಮೇಲೆ ಕಾಂಗ್ರೆಸ್ ಸೇರಿದೆ.. ಹೀಗೆ ಹಲವು ವಿಚಾರ ತೆರೆದಿಟ್ಟರು.
ಬೆಂಗಳೂರು[ಜು.22] ಸಿದ್ದರಾಮಯ್ಯನವರು ಜೆಡಿಎಸ್ ತೊರೆಯಲು ಏನು ಕಾರಣ? ಎಂಬುದನ್ನು ಅವರೇ ಹೇಳಿದ್ದಾರೆ. ವಿಧಾನಸಭೆ ಕಲಾಪದಲ್ಲಿ ಮಾತನಾಡುತ್ತ 2005-06ರ ಘಟನಾವಳಿಗಳನ್ನು ನೆನಪು ಮಾಡಿಕೊಂಡರು.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಗೊತ್ತಿಲ್ಲದೇ ಮಾತನಾಡಬೇಡಿ ಎಂದು ಬಿಜೆಪಿ ನಾಯಕ ಸಿಟಿ ರವಿಯವರಿಗೆ ಸಿದ್ದರಾಮಯ್ಯ ತಿವಿದರು. ಇದಾದ ಮೇಲೆ ಮಾತನಾಡಿದ ಸ್ಪೀಕರ್ ರಮೇಶ್ ಕುಮಾರ್ RSS, ಜನಸಂಘ, ಕಮ್ಯೂನಿಸ್ಟ್ ಪಾರ್ಟಿ, ಕಾಂಗ್ರೆಸ್ ಸೇರಿದಂತೆ ಎಲ್ಲ ಪಕ್ಷಗಳ ಮಾದರಿ ನಾಯಕರ ಉಲ್ಲೇಖ ಮಾಡಿದರು.
"
