ಹಿರಿಯ ವಕೀಲ ಮೋಹನ್ ಕಾತರಿಕಿ ರಾಜ್ಯ ವಕೀಲರ ತಂಡದ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ. ಸಚಿವ ಎಂ.ಬಿ ಪಾಟೀಲ್ ವರ್ತನೆಯಿಂದ ಬೇಸತ್ತು ರಾಜೀನಾಮೆ ನೀಡಿದ್ದಾರೆ ಎನ್ನಲಾಗಿದೆ.
ಬೆಂಗಳೂರು (ಜ.22): ಹಿರಿಯ ವಕೀಲ ಮೋಹನ್ ಕಾತರಿಕಿ ರಾಜ್ಯ ವಕೀಲರ ತಂಡದ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ. ಸಚಿವ ಎಂ.ಬಿ ಪಾಟೀಲ್ ವರ್ತನೆಯಿಂದ ಬೇಸತ್ತು ರಾಜೀನಾಮೆ ನೀಡಿದ್ದಾರೆ ಎನ್ನಲಾಗಿದೆ.
ಕಳೆದ ಎರಡೂವರೆ ದಶಕಗಳಿಂದ ರಾಜ್ಯವನ್ನು ಪ್ರತಿನಿಧಿಸುತ್ತಿದ್ದ ಮೋಹನ್ ಕಾತರಿಕಿ ಜಲ ವಿವಾದಗಳ ಕುರಿತು ಕರ್ನಾಟಕ ಪರ ವಾದ ಮಂಡನೆ ಮಾಡುತ್ತಿದ್ದರು. ಕಾವೇರಿ, ಕೃಷ್ಣ, ಮಹದಾಯಿ ಜಲ ವಿವಾದಗಳಲ್ಲಿ ವಾದ ಮಂಡಿಸಿದ್ದರು.
