ಭಾವಚಿತ್ರವನ್ನು ಬದಲಾಯಿಸಿ  ಮ್ಯಾಟ್ರಿಮೋನಿಗೆ ತನ್ನ ಪ್ರೊಫೈಲ್​ ಪಿಕ್ಚರ್​ ಹಾಕಿದ್ದ . ಒಂದೊಂದು ಪ್ರೊಫೈಲ್​ಗೂ ಒಂದೊಂದು ಹೆಸರು ಹಾಕಿ ಸುಮಾರು 30ಕ್ಕೂ ಹೆಚ್ಚು ಹೆಸರಲ್ಲಿ ವ್ಯವಹರಿಸ್ತಿದ್ದ..

ಬೆಂಗಳೂರು(ಜೂ.27): ಈತ ಉಮೇಶ್​ ರೆಡ್ಡಿಗೂ ಒಂದು ಕೈ ಮೇಲು.. ಈ ಕಾಮುಕನಿಗೆ ಪ್ರತಿಷ್ಠಿತ ಮಹಿಳೆಯರೇ ಟಾರ್ಗೆಟ್​. ಹೈ-ಫೈ ಮಹಿಳೇರನ್ನ ನಂಬಿಸಿ ಬಳಸಿಕೊಂಡು ಕೈ ಕೊಡ್ತಿದ್ದ ವಂಚಕ ಇವಾಗ ಅಂದರ್ ಆಗಿದ್ದಾನೆ.. ಬರೋಬ್ಬರಿ 40ಕ್ಕೂ ಹೆಚ್ಚು ಹೈಪ್ರೊಫೈಲ್​ ಲೇಡಿಗಳಿಗೆ ಚೀಟ್ ಮಾಡಿದ್ದಾನೆ. ಅಷ್ಟೇ ಅಲ್ಲ.. ಲಕ್ಷಾಂತರ ರೂಪಾಯಿ ವಂಚಿಸಿ ಜೇಬಿಗಿಳಿಸಿದ್ದಾನೆ.

ಈತನ ಹೆಸ್ರು ಸಾಧತ್ ಖಾನ್​. ವಯಸ್ಸಿನ್ನೂ 28ದಾಟಿಲ್ಲ. ಹಾಸನ ಮೂಲಕ ಆಟೋ ಡ್ರೈವರ್​ಗೆ ನಯವಾದ ಮಾತು ಹಾಗೂ ಫಾರಿನ್​ ಇಂಗ್ಲಿಷೇ ಬಂಡವಾಳ​. ಮಹಾನ್ ಕಾಮುಕ ಸಾಧತ್ ಖಾನ್​ನಿಂದ ಸುಮಾರು 40 ಮಹಿಳೆಯರು ವಂಚನೆಗೆ ಒಳಗಾಗಿದ್ದಾರೆ. ಮಲ್ಟಿ ಟ್ಯಾಲೆಂಟೆಡ್​​ ಈ ನಟೋರಿಯಸ್​​ ಸದ್ಯ ಜೈಲು ಸೇರಿದ್ದಾನೆ.

ITI ಮುಗ್ಸಿ ಊರು ಬಿಟ್ಟು ಕೋರಮಂಗಲದ ಟೆಲಿಕಾಲರ್​ ಕೆಲಸಕ್ಕೆ ಸೇರಿಕೊಂಡಿದ್ದ ಸಾಧತ್ ಖಾನ್​. ಭಾವಚಿತ್ರವನ್ನು ಬದಲಾಯಿಸಿ ಮ್ಯಾಟ್ರಿಮೋನಿಗೆ ತನ್ನ ಪ್ರೊಫೈಲ್​ ಪಿಕ್ಚರ್​ ಹಾಕಿದ್ದ . ಒಂದೊಂದು ಪ್ರೊಫೈಲ್​ಗೂ ಒಂದೊಂದು ಹೆಸರು ಹಾಕಿ ಸುಮಾರು 30ಕ್ಕೂ ಹೆಚ್ಚು ಹೆಸರಲ್ಲಿ ವ್ಯವಹರಿಸ್ತಿದ್ದ.. ಬಾಡಿಗೆಗೆ ಐಷಾರಾಮಿ ಆಡಿ ,ಬೆನ್ಝ್​ ಕಾರು ತೋರಿಸಿ ಮದ್ವೆ ಆಗ್ತೀನಿ ಅಂತ ನಂಬಿಸ್ತಿದ್ದ. ಲಕ್ಸುರಿ ಹೋಟೇಲ್​ಗೆ ಕರೆದ್​ಕೊಂಡ್ ಹೋಗಿ ಮಹಿಳೆಯರ ದೇಹಸೂರೆ ಮಾಡ್ತಿದ್ದ. ಇಂಟರೆಸ್ಟಿಂಗ್​ ಅಂದ್ರೆ ಒಬ್ಬಳನ್ನ ಚೀಟ್​ ಮಾಡಿದ ಬಳಿಕ ಆಕೆ ಕೊಟ್ಟ ದುಡ್ಡಿನ ಅರ್ಧ ಭಾಗವನ್ನೇ ಬಂಡವಾಳ ಮಾಡಿಕೊಂಡು ಮತ್ತೊಬ್ಬಳಿಗೆ ಬಲೆ ಬೀಸುತ್ತಿದ್ದ ಈ ಆಸಾಮಿ. ಇದೇ ರೀತಿ ಬಾಗಲೂರು ಪ್ರತಿಷ್ಠಿತ ಕಾಲೇಜಿನ ಲೆಕ್ಚರರ್​ಗೂ ಮೋಸ ಮಾಡಿದ್ದ ಸಾಧತ್ ಖಾನ್​.

ಅಧಿಕೃತವಾಗಿ 40 ಮಹಿಳೆಯರಾದ್ರೂ ಮರ್ಯಾದೆಗೆ ಅಂಜಿ ದೂರು ಕೊಡದವರ ಸಂಖ್ಯೆ ನೂರಕ್ಕೂ ಹೆಚ್ಚು ಇರಬಹುದು ಅಂತ ಪೊಲೀಸರು ಶಂಕಿಸಿದ್ದಾರೆ. ಸದ್ಯ ನ್ಯಾಯಾಂಗ ಬಂಧನದಲ್ಲಿರುವ ಈತನನ್ನ ಮತ್ತೆ ಕಸ್ಟಡಿಗೆ ತೆಗೆದುಕೊಳ್ಳೋ ಸಾಧ್ಯತೆ ಇದೆ. ಈ ಸಂಬಂಧ ಬಾಗಲೂರು ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.