ಯಾವುದೇ ಕಾರಣಕ್ಕೂ ಕಾಲಾ ಬಿಡುಗಡೆ ಮಾಡಬಾರದು; ಥಿಯೇಟರ್ ಮಾಲಿಕರಿಗೆ ಖಡಕ್ ಎಚ್ಚರಿಕೆ

news | Wednesday, June 6th, 2018
Suvarna Web Desk
Highlights

ಕಾಲಾ ಚಿತ್ರ ಪ್ರದರ್ಶನಕ್ಕೆ ಅವಕಾಶ ಕೊಡಬಾರದು.  ಮನವಿ ಧಿಕ್ಕರಿಸಿದರೆ ಟಿಕೆಟ್ ಪಡೆದು ಒಳಗೆ ನುಗ್ತೀವಿ. ಚಿತ್ರಮಂದಿರಗಳು ಹಾಗೂ ಮಲ್ಟಿಪ್ಲೆಕ್ಸ್ ಗಳನ್ನ ಒಡೆದು ಹಾಕ್ತೀವಿ. ನಮ್ಮ ಕಾರ್ಯಕರ್ತರೆಲ್ಲ ಮುತ್ತಿಗೆ ಹಾಕಲು ಸಿದ್ಧರಿದ್ದಾರೆ ಎಂದು ಸಂಪಿಗೆ ಹಾಗೂ ಮಂತ್ರಿಮಾಲ್ ಮಾಲಿಕರಿಗೆ  ಪ್ರವೀಣ್ ಶೆಟ್ಟಿ ಖಡಕ್ ಎಚ್ಚರಿಕೆ ನೀಡಿದ್ದಾರೆ. 

ಬೆಂಗಳೂರು (ಜೂ. 06):  'ಕಾಲ' ಚಿತ್ರ ಯಾವುದೇ ಕಾರಣಕ್ಕೂ ಬಿಡುಗಡೆ ಆಗಬಾರದು. ನಮ್ಮ ಹೋರಾಟ ರಜನಿಕಾಂತ್ ವಿರುದ್ಧ. ಚಿತ್ರ ಬಿಡುಗಡೆಯಾಗಲು ನಾವು ಬಿಡಲ್ಲ ಎಂದು ಕರವೇ ಅಧ್ಯಕ್ಷ ಪ್ರವೀಣ್ ಶೆಟ್ಟಿ ಹೇಳಿದ್ದಾರೆ. 

ನಾಗರಹಾವು ಚಿತ್ರ ತಮಿಳಿನಲ್ಲಿ ಡಬ್ ಆಗಿದ್ದಾಗ ಅದನ್ನು ಮೂಲೆ ಗುಂಪು ಮಾಡಿದ್ರು.  ತಮಿಳುನಾಡಿನಲ್ಲಿ ಕನ್ನಡ ಚಿತ್ರಕ್ಕೆ ಗೌರವ ಕೊಡಲಿಲ್ಲ.  ಈಗ ಕಾವೇರಿ ವಿಚಾರವನ್ನು ತಮ್ಮ ಹಕ್ಕು ಎನ್ನುತ್ತಿದ್ದಾರೆ.  ಕೋರ್ಟ್ ಮನವಿ ಮಾಡಿದರೂ ನಮಗೆ ಕನ್ನಡ ಮುಖ್ಯ.  ಕೋರ್ಟ್ ಹೋರಾಡಬೇಡಿ ಎಂದು ಹೇಳಿಲ್ಲ.  ಮುಖ್ಯಮಂತ್ರಿ ಕೂಡ ನಮ್ಮ ಜತೆ ಇದ್ದಾರೆ. ಯಾವುದೇ ಕಾರಣಕ್ಕೂ ಚಿತ್ರ ಬಿಡುಗಡೆ ಮಾಡಲು ನಾವು ಬಿಡುವುದಿಲ್ಲ ಎಂದಿದ್ದಾರೆ. 

ಕಾಲಾ ಚಿತ್ರ ಪ್ರದರ್ಶನಕ್ಕೆ ಅವಕಾಶ ಕೊಡಬಾರದು.   ಮನವಿ ಧಿಕ್ಕರಿಸಿದರೆ ಟಿಕೆಟ್ ಪಡೆದು ಒಳಗೆ ನುಗ್ತೀವಿ. ಚಿತ್ರಮಂದಿರಗಳು ಹಾಗೂ ಮಲ್ಟಿಪ್ಲೆಕ್ಸ್ ಗಳನ್ನ ಒಡೆದು ಹಾಕ್ತೀವಿ. ನಮ್ಮ ಕಾರ್ಯಕರ್ತರೆಲ್ಲ ಮುತ್ತಿಗೆ ಹಾಕಲು ಸಿದ್ಧರಿದ್ದಾರೆ ಎಂದು ಸಂಪಿಗೆ ಹಾಗೂ ಮಂತ್ರಿಮಾಲ್ ಮಾಲಿಕರಿಗೆ  ಪ್ರವೀಣ್ ಶೆಟ್ಟಿ ಖಡಕ್ ಎಚ್ಚರಿಕೆ ನೀಡಿದ್ದಾರೆ. 
 
Comments 0
Add Comment

  Related Posts

  Kannada New Cinema

  video | Wednesday, March 28th, 2018

  Darshan Rare Interview

  video | Thursday, March 22nd, 2018

  The Making of Ayogya

  video | Thursday, March 22nd, 2018

  Kannada New Cinema

  video | Wednesday, March 28th, 2018
  Shrilakshmi Shri