Asianet Suvarna News Asianet Suvarna News

ರಾಜಭವನದ ಸೌಂದರ್ಯ ಕಣ್ತುಂಬಿಕೊಂಡ ಸಾರ್ವಜನಿಕರು

ಜನಸಾಮಾನ್ಯರಿಗೂ ರಾಜಭವನ ಪ್ರವೇಶ ಕಲ್ಪಿಸುವ ಉದ್ದೇಶದಿಂದ ರಾಜ್ಯಪಾಲ ವಜುಭಾಯಿ ವಾಲಾ ಅವರು ಆಗಸ್ಟ್ 16ರಿಂದ 31ರವರೆಗೆ ಹದಿನೈದು ದಿನಗಳ ಕಾಲ ಸಾರ್ವಜನಿಕರಿಗೆ ರಾಜಭವನವನ್ನು ಮುಕ್ತಗೊಳಿಸಿದ್ದರು. ಆದರೆ, ಮಾಜಿ ಪ್ರಧಾನಮಂತ್ರಿ ವಾಜಪೇಯಿ ಅವರ ನಿಧನದಿಂದ ಆಗಸ್ಟ್ 16ರಿಂದ 22ರವರೆಗಿನ ರಾಜಭವನ ಪ್ರವೇಶ ಅವಕಾಶವನ್ನು ನಿರ್ಬಂಧಿಸಿದ್ದರು. ಈ ಅವಧಿಗೆ ನೋಂದಣಿ ಮಾಡಿಕೊಂಡವರಿಗೆ ಸೆಪ್ಟೆಂಬರ್ 1ರಿಂದ 6ರವರೆಗೆ ಅವಕಾಶ ಕಲ್ಪಿಸಲಾಗಿದೆ.

Karnataka Raj Bhavan Doors opened for public
Author
Bengaluru, First Published Aug 24, 2018, 3:58 PM IST

ಬೆಂಗಳೂರು[ಆ.24]: ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಆಗಸ್ಟ್ 23ರಿಂದ ಸೆಪ್ಟೆಂಬರ್ 6ರ ವರೆಗೆ ರಾಜಭವನ ವೀಕ್ಷಣೆಗೆ ಸಾರ್ವಜನಿಕರಿಗೆ ವಿಶೇಷ ಅವಕಾಶ ಕಲ್ಪಿಸಿದ್ದು, ಮೊದಲ ದಿನವಾದ ಗುರುವಾರ 500 ಮಂದಿ ರಾಜಭವನ ಕಣ್ತುಂಬಿಕೊಂಡಿದ್ದಾರೆ.

ಜನಸಾಮಾನ್ಯರಿಗೂ ರಾಜಭವನ ಪ್ರವೇಶ ಕಲ್ಪಿಸುವ ಉದ್ದೇಶದಿಂದ ರಾಜ್ಯಪಾಲ ವಜುಭಾಯಿ ವಾಲಾ ಅವರು ಆಗಸ್ಟ್ 16ರಿಂದ 31ರವರೆಗೆ ಹದಿನೈದು ದಿನಗಳ ಕಾಲ ಸಾರ್ವಜನಿಕರಿಗೆ ರಾಜಭವನವನ್ನು ಮುಕ್ತಗೊಳಿಸಿದ್ದರು. ಆದರೆ, ಮಾಜಿ ಪ್ರಧಾನಮಂತ್ರಿ ವಾಜಪೇಯಿ ಅವರ ನಿಧನದಿಂದ ಆಗಸ್ಟ್ 16ರಿಂದ 22ರವರೆಗಿನ ರಾಜಭವನ ಪ್ರವೇಶ ಅವಕಾಶವನ್ನು ನಿರ್ಬಂಧಿಸಿದ್ದರು. ಈ ಅವಧಿಗೆ ನೋಂದಣಿ ಮಾಡಿಕೊಂಡವರಿಗೆ ಸೆಪ್ಟೆಂಬರ್ 1ರಿಂದ 6ರವರೆಗೆ ಅವಕಾಶ ಕಲ್ಪಿಸಲಾಗಿದೆ.

ಮೊದಲ ತಂಡವಾಗಿ ಗುರುವಾರ ಭೇಟಿ ನೀಡಿದ ಸಾರ್ವಜನಿಕರು ರಾಜಭವನ ಹಾಗೂ ಆವರಣದಲ್ಲಿ ಸುತ್ತಾಡಿ ಖುಷಿ ಪಟ್ಟರು. ರಾಜಭವನದಲ್ಲಿ ಪ್ರದರ್ಶಿಸಲಾಗಿದ್ದ ಅಪರೂಪದ ಭಾವಚಿತ್ರಗಳು ಹಾಗೂ ಐತಿಹಾಸಿಕ ವಿಷಯಗಳನ್ನು ರಾಜಭವನ ಸಿಬ್ಬಂದಿ, ವೀಕ್ಷಕರಿಗೆ ವಿವರಿಸಿದರು. ವಿಶೇಷ ಸಂದರ್ಭದಲ್ಲಿ ಆಹ್ವಾನ ಪತ್ರಿಕೆಯೊಂದಿಗೆ ಮಾತ್ರ ಸಾರ್ವಜನಿಕರಿಗೆ ರಾಜಭವನಕ್ಕೆ ಅವಕಾಶವಿರುತ್ತದೆ. ನಮ್ಮಂತಹ ಜನಸಾಮಾನ್ಯರಿಗೂ ಅವಕಾಶ ನೀಡಿದ್ದು ಸಂತಸ ತಂದಿದೆ ಎಂದು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಸಂತಸ ವ್ಯಕ್ತಪಡಿಸಿದರು. ರಾಜಭವನ ಪ್ರವೇಶಿಸಲು ಆನ್‌ಲೈನ್ ನೋಂದಣಿಗೆ ಅವಕಾಶ ಮಾಡಿಕೊಡಲಾಗಿತ್ತು. ಈಗಾಗಲೇ ಸೆಪ್ಟೆಂಬರ್ 6ರವರೆಗೆ ಭೇಟಿ ನೀಡಲಿರುವವರ ನೋಂದಣಿ ಪೂರ್ಣಗೊಂಡಿದೆ. ಹೀಗಾಗಿ ನೋಂದಣಿ ಪ್ರಕ್ರಿಯೆ ಸ್ಥಗಿತಗೊಳಿಸಿದ್ದು, ನೋಂದಣಿ ಮಾಡಿಕೊಂಡವರಿಗೆ ರಾಜಭವನ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗುತ್ತಿದೆ ಎಂದು ರಾಜಭವನದ ಅಧಿಕಾರಿಗಳು ಮಾಹಿತಿ ನೀಡಿದರು.

Follow Us:
Download App:
  • android
  • ios