ಹೊಸ ಸರಕಾರದಿಂದ ಪಿಯು ಉಪನ್ಯಾಸಕರಿಗೆ ಸಿಹಿ ಸುದ್ದಿ

First Published 25, Jul 2018, 5:31 PM IST
Karnataka PU lecturers transfer counselling starts from July 26
Highlights

ಅದೆಷ್ಟೋ ತಿಂಗಳುಗಳಿಂದ ಕಾಯುತ್ತಿದ್ದ ಪಿಯು ಉಪನ್ಯಾಸಕರು ಇಲಾಖೆಯ ಸುತ್ತೋಲೆಯ ಸುದ್ದಿ ಕೇಳಿ ಕೊಂಚ ನಿರಾಳರಾಗಿದ್ದಾರೆ. ಪಿಯು ಉಪನ್ಯಾಸಕರಿಗೆ ಹೊಸ ಸರಕಾರ ವರ್ಗಾವಣೆ ಭಾಗ್ಯ ನೀಡಿದೆ.

ಬೆಂಗಳೂರು[ಜು.25]  ಅಂತೂ ಇಂತು  ಪಿಯು ಉಪನ್ಯಾಸಕರಿಗೆ ವರ್ಗಾವಣೆ ಭಾಗ್ಯ ಕೂಡಿ ಬಂದಿದೆ. ದ್ವಿತೀಯ ಪಿಯು ಉಪನ್ಯಾಸಕರ ವರ್ಗಾವಣೆ ಪ್ರಕ್ರಿಯೆಗೆ ಚಾಲ‌ನೆ ದೊರೆತಿದೆ. 

ವರ್ಗಾವಣೆ ಪ್ರಕ್ರಿಯೆ ಕುರಿತು ಆದೇಶ ಹೊರಡಿಸಿದ ಪದವಿ ಪೂರ್ವ ಶಿಕ್ಷಣ ಇಲಾಖೆ ಜುಲೖ 26 ರಿಂದ ಆಗಸ್ಟ್ 4 ರವರಿಗೆ ವಿಷಯವಾರು ಉಪನ್ಯಾಸಕರ ಕೌನ್ಸಿಲಿಂಗ್ ‌ನಡೆಯಲಿದೆ.. ಕೌನ್ಸಿಲಿಂಗ್ ವೇಳೆ ಉಪನ್ಯಾಸಕರು ಕಡ್ಡಾಯವಾಗಿ ಐಡಿ ಕಾರ್ಡ್ ಹಾಗೂ ಮೂಲ ಪ್ರಮಾಣ ಪತ್ರವನ್ನ‌ ಹಾಜರು ಪಡಿಸಬೇಕು ಎಂದು ತಿಳಿಸಿದೆ.

ಈಗಾಗಲೇ ಉಪನ್ಯಾಸಕರ ವರ್ಗಾವಣೆ ಪ್ರಕ್ರಿಯೆ ಸಂಬಂಧ ಜಿಲ್ಲಾ ಉಪನಿರ್ದೇಶಕರಿಗೆ ಮಾಹಿತಿ ನೀಡಲಾಗಿದೆ. ಎಲ್ಲರ ಮನವಿ ಮತ್ತು ಆಯ್ಕೆ ಆಧರಿಸಿ ಪಾರದರ್ಶಕ ವರ್ಗಾವಣೆ ಮಾಡುತ್ತೇವೆ ಎಂದು ಪದವಿ ಪೂರ್ವ ಶಿಕ್ಷಣ ‌ಇಲಾಖೆ ನಿರ್ದೇಶಕಿ ಸಿ.ಶಿಖಾ ತಿಳಿಸಿದ್ದಾರೆ.

loader