ಬೆಂಗಳೂರು [ಜು.20] :  ಶನಿವಾರ ನಿಗದಿತ ಅವಧಿಯೊಳಗೆ ಬಹುಮತ ಸಾಬೀತು ಪಡಿಸುವಂತೆ ರಾಜ್ಯಪಾಲ ವಜೂಭಾಯಿ ವಾಲಾ ಅವರು ಮುಖ್ಯ ಮಂತ್ರಿ ಎಚ್.ಡಿ.ಕುಮಾರಸ್ವಾಮಿಗೆ ಎರಡೆರಡು ಬಾರಿ ನಿರ್ದೇಶನ ನೀಡಿದ ಹೊರತಾಗ್ಯೂ ಸಭಾಧ್ಯಕ್ಷ ಕೆ.ಆರ್.ರಮೇಶ್ ಕುಮಾರ್ ಕಲಾಪವನ್ನು ಸೋಮ ವಾರಕ್ಕೆ ಮುಂದೂಡಿದರು.

ರಾಜ್ಯಪಾಲರ ಖಚಿತ ನಿರ್ದೇಶನವಿದ್ದರೂ ಶಾಸಕಾಂಗದ ಸಾರ್ವಭೌಮತ್ವ ಉಳಿಸಿಕೊಳ್ಳುವ ನಿಲುವಿಗೆ ಅಂಟಿಕೊಂಡ ಸಭಾಧ್ಯಕ್ಷ ರಮೇಶ್ ಕುಮಾರ್ ಅವರು ವಿಶ್ವಾಸ ಮತ ನಿರ್ಣಯದ ಚರ್ಚೆ ಶುಕ್ರವಾರ ಅಪೂರ್ಣ ಗೊಂಡ ಕಾರಣ ನೀಡಿ ಈ ತೀರ್ಮಾನ ಕೈಗೊಂಡರು. 

ಸಾಂವಿಧಾನಿಕ ಬಿಕ್ಕಟ್ಟು ಎದುರಾಗಿದೆ, ರಾಷ್ಟ್ರಪತಿ ಆಳ್ವಿಕೆ ಜಾರಿ ಸೂಕ್ತ ಎಂದು ರಾಜ್ಯಪಾಲರು ಶಿಫಾರಸು ಮಾಡಿದರೆ ಕೇಂದ್ರ ಮಧ್ಯಪ್ರವೇಶ ಮಾಡಲು ಅವಕಾಶವಿದೆ. 

ರಾಜ್ಯಪಾಲರ ಶಿಫಾರ ಸನ್ನು ಕೇಂದ್ರ ಗೃಹ ಸಚಿವಾಲಯ ಪರಿಶೀಲಿಸಿ ಕೇಂದ್ರ ಸಂಪುಟದ ಮುಂದಿಡುತ್ತದೆ. ಅಲ್ಲೂ ಒಪ್ಪಿದರೆ ರಾಷ್ಟ್ರಪತಿಗಳ ಅಂಕಿತಕ್ಕೆ ರವಾನೆ ಆಗು ತ್ತದೆ. ಆದರೆ, ಸೋಮವಾರ ವಿಶ್ವಾಸಮತ ಯಾಚಿಸುವುದಾಗಿ ಸಿಎಂ ಹೇಳಿದ್ದರಿಂದ ಕೇಂದ್ರ ತಕ್ಷಣಕ್ಕೆ ಮಧ್ಯಪ್ರವೇಶಿಸುವ ಸಾಧ್ಯತೆ ಕಡಿಮೆ.