ಕರ್ನಾಟಕ ಸಂಪುಟದಲ್ಲಿ ಈ ಸಚಿವರ ಬದಲಾವಣೆ ..?

Karnataka politics:no cabinet expansion for now says venugopal
Highlights

ಅಸಮಾಧಾನಗೊಂಡ ಕಾಂಗ್ರೆಸ್ ಶಾಸಕರನ್ನು ಸಮಾಧಾನಗೊಳಿಸುವ ಸಂಬಂಧ ಶೀಘ್ರದಲ್ಲೇ ಸಚಿವ ಸಂಪುಟ ವಿಸ್ತರಣೆ ಮಾಡಬಹುದು ಎಂಬನಿರೀಕ್ಷೆ ಹುಸಿಯಾಗುವ ಸಾಧ್ಯತೆಯಿದೆ.

ಬೆಂಗಳೂರು :  ಅಸಮಾಧಾನಗೊಂಡ ಕಾಂಗ್ರೆಸ್ ಶಾಸಕರನ್ನು ಸಮಾಧಾನಗೊಳಿಸುವ ಸಂಬಂಧ ಶೀಘ್ರದಲ್ಲೇ ಸಚಿವ ಸಂಪುಟ ವಿಸ್ತರಣೆ ಮಾಡಬಹುದು ಎಂಬನಿರೀಕ್ಷೆ ಹುಸಿಯಾಗುವ ಸಾಧ್ಯತೆಯಿದೆ.

ಸದ್ಯಕ್ಕೆ ರಾಜ್ಯ ಸಚಿವ ಸಂಪುಟ ವಿಸ್ತರಿಸುವ ಪ್ರಮೇಯವೇ ಇಲ್ಲ ಎಂದು ಖುದ್ದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣು ಗೋಪಾಲ್ ಅವರೇ ತಿಳಿಸಿದ್ದಾರೆ. ಸಚಿವ ಸ್ಥಾನದಿಂದ ವಂಚಿತಗೊಂಡಿರುವ ಶಾಸಕರನ್ನು ಸಮಾಧಾನಗೊಳಿಸುವ ಸಲುವಾಗಿ ಕೆಲದಿನಗಳಲ್ಲೇ ಸಂಪುಟ ವಿಸ್ತರಣೆ ನಡೆಯಲಿದೆ ಎಂಬ ಮಾತು ಕಾಂಗ್ರೆಸ್ ಪಾಳೆಯದಿಂದಲೇ ಬಲವಾಗಿ ಕೇಳಿಬರುತ್ತಿತ್ತು. ತನ್ನ ಪಾಲಿನ ಆರು 
ಸಚಿವ ಸ್ಥಾನಗಳ ಪೈಕಿ ಮೂರು ಅಥವಾ ನಾಲ್ಕು ಸ್ಥಾನಗಳನ್ನು ಭರ್ತಿ ಮಾಡಬಹುದು ಎನ್ನ ಲಾಗಿತ್ತು. 

ಆದರೆ, ಇದೀಗ ವೇಣು ಗೋಪಾಲ್ ಅವರ ಹೇಳಿಕೆ ನಂತರ ಅತೃಪ್ತರು ಮುಂದೇನು ಮಾಡುತ್ತಾರೆ ಎಂಬುದು ಕುತೂಹಲಕ್ಕೆ ಕಾರಣ ವಾಗಿದೆ.  ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸದ್ಯಕ್ಕೆ ಸಚಿವ ಸಂಪುಟ ವಿಸ್ತರಿಸುವ ಪ್ರಮೇಯ ಇಲ್ಲ. ಆರು  ತಿಂಗಳವರೆಗೆ ಹಾಲಿ ಸಚಿವರ ಕಾರ್ಯವೈಖರಿ ಯನ್ನು ಗಮನಿಸಲಾ ಗುವುದು. ಯಾವ ಸಚಿವರ ಕೆಲಸ ಸಮಾಧಾನ ತರುವುದಿಲ್ಲವೋ ಅಂತಹವರನ್ನು ಬದಲಿಸಿ ಹೊಸಬರಿಗೆ ಅವಕಾಶ ನೀಡಲಾಗುವುದು ಎಂದರು.

ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಕಾಂಗ್ರೆಸ್‌ನಲ್ಲಿ ಎಲ್ಲ ಶಾಸಕರೂ ಸಚಿವರಾಗಲು ಅರ್ಹರಾಗಿದ್ದಾರೆ. ಆದರೆ, ಎಲ್ಲರಿಗೂ ಒಂದೇ ಬಾರಿ ಸಚಿವ ಸ್ಥಾನ ನೀಡಲು ಆಗುವುದಿಲ್ಲ. ಈಗ ಸಚಿವರಾಗಿರುವವರ ಯಾವ ರೀತಿ ಕಾರ್ಯ ನಿರ್ವಹಿಸುತ್ತಾರೆ. ತಮಗೆ ನೀಡಿರುವ ಖಾತೆಗಳ ಜವಾಬ್ದಾರಿಯನ್ನು ಹೇಗೆ ನಿಭಾಯಿಸುತ್ತಾರೆ ಎಂಬುದನ್ನು ಗಮನಿಸಲಾಗುವುದು. ಸಮರ್ಥ ವಾಗಿ ಕಾರ್ಯನಿರ್ವಹಿಸದಿದ್ದರೆ ಅಥವಾ ಯಾರ ಕೆಲಸಗಳು ಸಮಾಧಾನ ತರುವುದಿಲ್ಲವೋ ಅಂತಹವರನ್ನು ಬದಲಿಸಿ ಹೊಸಬರಿಗೆ ಅವಕಾಶ ನೀಡಲಾಗುವುದು. ಆಗ ಇತರರಿಗೂ ಅವಕಾಶ ದೊರೆಯಲಿದೆ ಎಂದರು.

loader