ಬೆಂಗಳೂರು[ಜು.10]: ರಾಜ್ಯದಿಂದ ದೋಸ್ತಿ ಸರ್ಕರಕ್ಕೆ ಶಾಕ್ ಕೊಟ್ಟು ಮುಂಬೈಗೆ ಹಾರುತ್ತಿರುವವರ ಸಂಖ್ಯೆ ವೃದ್ಧಿಸುತ್ತಲೇ ಇದೆ. ಇದೀಗ ಜೆಡಿಎಸ್‌ಗೆ ನಾಲ್ಕನೇ ಶಾಕ್ ಎಂಬಂತೆ ಕೋಲಾರ ಶಾಸಕ ಶ್ರೀನಿವಾಸ ಗೌಡ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದಾರೆ. ಅಲ್ಲದೇ ಬಿಎಸ್‌ವೈ ಪುತ್ರ ವಿಜಯೇಂದ್ರ ಪ್ರಯಾಣಿಸುತ್ತಿರುವ ವಿಮಾನದಲ್ಲೇ ದೆಹಲಿಗೆ ತೆರಳಿದ್ದು, ಮತ್ತಷ್ಟು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.

"

ಹೌದು ಶಾಸಕರು ಒಬ್ಬರಾದ ಬಳಿಕ ಮತ್ತೊಬ್ಬರಂತೆ ರಾಜೀನಾಮೆ ನೀಡುತ್ತಿದ್ದ ಬೆನ್ನಲ್ಲೇ ಎಚ್ಚೆತ್ತುಕೊಂಡಿದ್ದ ಜೆಡಿಎಸ್ ನಾಯಕರು, ತಮ್ಮ ಶಾಸಕರನ್ನು ನಂದಿ ಬೆಟ್ಟ ಬಳಿಯಿರುವ ರೆಸಾರ್ಟ್ ಒಂದಕ್ಕೆ ಶಿಫ್ಟ್ ಮಾಡಿದ್ದರು. ಆದರೆ ಇಂದು ಬುಧವಾರ ಬೆಳಗ್ಗೆ ಬಾಡೂಟ ಇದೆ ಎಂದು, ಸಚಿವ ಬಂಡೆಪ್ಪ ಕಾಶೆಂಪೂರ್ ಜೊತೆ ರೆಸಾರ್ಟ್‌ನಿಂದ ಹೊರ ಬಂದಿದ್ದ ಶ್ರೀನಿವಾಸ್ ಗೌಡ ಮಧ್ಯಾಹ್ನ ವೇಳೆಗೆ ವಿಮಾನ ನಿಲ್ದಾಣದಲ್ಲಿ ಪ್ರತ್ಯಕ್ಷರಾಗಿದ್ದಾರೆ. ಈ ವೇಳೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದ ಶ್ರೀನಿವಾಸ ಗೌಡ 'ಮುಂಬೈಗಲ್ಲ ದೆಹಲಿಗೆ ತೆರಳುತ್ತಿದ್ದೇನೆ. ಸಭೆಯೊಂದರಲ್ಲಿ ಪಾಲ್ಗೊಳ್ಳಬೇಕು, ಹೀಗಾಗಿ ಅನುಮತಿ ಪಡೆದಿದ್ದೇನೆ' ಎಂದು ತಿಳಿಸಿ ತರಾತುರಿಯಲ್ಲಿ ಏರ್‌ಪೋರ್ಟ್ ಪ್ರವೇಶಿಸಿದ್ದಾರೆ.

ಕರ್ನಾಟಕ ರಾಜಕಾರಣದಲ್ಲಿ ಅಲ್ಲೋಲ ಕಲ್ಲೋಲ: ಎಲ್ಲಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ

ಆದರೆ ವಿಮಾನ ನಿಲ್ದಾಣ ಪ್ರವೇಶಿಸಿದ ಶಾಸಕ ಬಿ. ವೈ ವಿಜಯೇಂದ್ರ ಪ್ರಯಾಣಿಸುತ್ತಿದ್ದ ವಿಮಾನದಲ್ಲೇ ದೆಹಲಿಗೆ ಹಾರಿರುವುದು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಶ್ರೀನಿವಾಸಗೌಡ ಕೂಡಾ ದೋಸ್ತಿಗೆ ಕೈ ಕೊಡ್ತಾರಾ? ಎಂಬ ಪ್ರಶ್ನೆ ಮೂಡಿಸಿದೆ.