Asianet Suvarna News Asianet Suvarna News

ಆಪರೇಷನ್‌ ಗುಪ್ತ ಸಂಕ್ರಾಂತಿ: ದಿಲ್ಲಿಯಲ್ಲಿ ಬಿಜೆಪಿ ಮೀಟ್-ಮೈತ್ರಿ ಸರ್ಕಾರ ಶೇಕ್ !

ಕರ್ನಾಟಕದಲ್ಲಿ ಸರ್ಕಾರ ರಚಿಸಿ ಲೋಕಸಭಾ ಚುನಾವಣೆಗೆ ಗರಿಷ್ಠ ಸೀಟು ಗೆಲ್ಲೋ ಲೆಕ್ಕಾಚಾರದಲ್ಲಿರುವ ಬಿಜೆಪಿ ತೆರೆಮರೆಯಲ್ಲಿ ಕಸರತ್ತು ನಡೆಸುತ್ತಿದೆ. ಇದೀಗ ಕೇಂದ್ರ ಸಚಿವ ಪಿಯೂಷ್ ಗೋಯಲ್ ನೇತೃತ್ವದಲ್ಲಿ ರಾಜ್ಯ ಬಿಜೆಪಿ ಮುಖಂಡರು ಸಭೆ ನಡೆಸಿದ್ದಾರೆ.
 

Karnataka Politics JDS Congress Government worried about BJP high command meet in Delhi
Author
Bengaluru, First Published Jan 15, 2019, 12:35 PM IST

ನವದೆಹಲಿ(ಜ.15): ಬಿಜೆಪಿಯ ಸರ್ಕಾರ ರಚನೆಯ ಕಸರತ್ತು ದಿಲ್ಲಿಯಲ್ಲಿ ಕೇಂದ್ರ ಸಚಿವ ಪಿಯೂಷ್‌ ಗೋಯಲ್ ನೇತೃತ್ವದಲ್ಲಿ ನಡೆಯುತ್ತಿದ್ದರೆ, ಹೈಕಮಾಂಡ್‌ ಮತ್ತು ಯಡಿಯೂರಪ್ಪ ನಡುವೆ ಕೊಂಡಿ ಆಗಿರುವವರು ಬೆಂಗಳೂರಿನ ಶಾಸಕ ಅರವಿಂದ ಲಿಂಬಾವಳಿ. ಅತೃಪ್ತ ಶಾಸಕರ ಜೊತೆ ಮಾತನಾಡಲು ಯಡಿಯೂರಪ್ಪ ನಿಯೋಜಿಸಿರುವುದು ಜಗದೀಶ್‌ ಶೆಟ್ಟರ್‌ ಅವರನ್ನು. ಇನ್ನು ಮಲ್ಲೇಶ್ವರಂ ಶಾಸಕ ಅಶ್ವತ್ಥನಾರಾಯಣ್‌, ಯಲಹಂಕ ಶಾಸಕ ಎಸ್‌.ಆರ್‌.ವಿಶ್ವನಾಥ್‌, ಬಾಲಚಂದ್ರ ಜಾರಕಿಹೋಳಿ, ಸಿ.ಪಿ.ಯೋಗೇಶ್ವರ್‌ ಮತ್ತು ಪ್ರದೀಪ್‌ ಶೆಟ್ಟರ್‌ ಸರ್ಕಾರ ರಚನೆಯ ಪ್ರಯತ್ನಕ್ಕೆ ಗ್ರೌಂಡ್‌ನಲ್ಲಿ ಓಡಾಡುತ್ತಿದ್ದಾರೆ.

ಇದನ್ನೂ ಓದಿ: ಕರ್ನಾಟಕದಲ್ಲಿ ಸರ್ಕಾರ ರಚನೆ ಯತ್ನಕ್ಕೆ ಕೊನೆಗೂ ಅಮಿತ್‌ ಶಾ ಎಂಟ್ರಿ!

ಶಾಸಕರ ಸಭೆ ಎಂಬ ಔಪಚಾರಿಕತೆ
ವೆಸ್ಟರ್ನ್‌ ಕೋರ್ಟ್‌ ಹೋಟೆಲ್‌ನಲ್ಲಿ ಎರಡು ದಿನ ನಡೆದ ಶಾಸಕರ ಸಭೆಯಲ್ಲಿ ಚರ್ಚೆ ನಡೆದಿದ್ದಕ್ಕಿಂತ ಊಟ ಉಪಾಹಾರ ಗುಸುಗುಸು ಚರ್ಚೆ ನಡೆದಿದ್ದೇ ಹೆಚ್ಚು. ಸಭೆಯಲ್ಲಿ ಲೋಕಸಭಾ ಚುನಾವಣಾ ತಯಾರಿಯ ಗಂಭೀರ ಚರ್ಚೆ ಇತ್ಯಾದಿ ನಡೆಯಿತು ಎಂದು ಶೋಭಾ, ಈಶ್ವರಪ್ಪ, ಸಿ.ಟಿ.ರವಿ ಮಾಧ್ಯಮಗಳಿಗೆ ಹೇಳುತ್ತಿದ್ದರಾದರೂ ಒಳಗಡೆ ಯಾವುದೇ ಚರ್ಚೆ ನಡೆದಿಲ್ಲ. 

ಇದನ್ನೂ ಓದಿ: ಶೀಘ್ರದಲ್ಲೇ ಕೆಲ ಜಿಲ್ಲೆಯ ಶಾಸಕರಿಗೆ ಶುಭಸುದ್ದಿ: ಬಿ.ಎಸ್.ಯಡಿಯೂರಪ್ಪ!

ಶಾಸಕರು ನಮ್ಮನ್ನು ಊರಿಗೆ ಹೋಗಲು ಬಿಡಿ ಎಂದು ಕೇಳಿಕೊಂಡರೆ, ಯಡಿಯೂರಪ್ಪ ಭಾವನಾತ್ಮಕವಾಗಿ ಮಾತನಾಡಿ ಶಾಸಕರು ಇಲ್ಲೇ ಇರಿ ಎಂದು ಕೇಳಿಕೊಳ್ಳುತ್ತಿದ್ದರು. ಸಭೆ, ಕಾಫಿ ತಿಂಡಿಗೆ ಬರ್ಖಾಸ್‌್ತ ಆಗುತ್ತಿತ್ತು. ದಕ್ಷಿಣ ಕನ್ನಡದ ಊಟ ತಿಂಡಿ ಇದ್ದ ಶಾಸಕರ ಸಭೆಗೆ ಆತಿಥ್ಯ ಕೇಂದ್ರ ಸಚಿವ ಸದಾನಂದ ಗೌಡರದು.

Follow Us:
Download App:
  • android
  • ios