ಬೆಂಗಳೂರು[ಡಿ.30] ‘ದಲಿತರು ಮುಖ್ಯಮಂತ್ರಿ ಆಗಬೇಕು, ಪ್ರಧಾನಿ ಆಗಬೇಕು ಎಂದು ಕೇಳಲು ಆರಂಭಿಸಿ 50 ವರ್ಷ ಆಯ್ತು ಎಂದು ಹೇಳುತ್ತ ಮಲ್ಲಿಕಾರ್ಜುನ ಖರ್ಗೆ ನಗೆ ಬೀರಿದ್ದಾರೆ.

ದಲಿತರ ಸಮಸ್ಯೆ ಬಗ್ಗೆ ಬಾಯಿಮಾತಿನಲ್ಲಿ ಹೇಳಿದರೆ ಸಾಲದು. ದಲಿತರ ನಿಜ ಸಮಸ್ಯೆ ಏನು ಎಂದು ತಿಳಿದು ಬಗೆಹರಿಸಬೇಕು. ನಾನು ಈಗ ಹೇಳಿಕೆ ನೀಡಿದರೆ, ಪತ್ರಿಕಾ ಪ್ರಕಟಣೆ ನೀಡಿದರೆ  ಪರಿಹಾರ ಸಿಗುವುದಿಲ್ಲ ಎಂದು ಹೇಳಿದರು.

ಬೆಂಗಳೂರಿನಲ್ಲಿ ಮಾತನಾಡಿದ ಹಿರಿಯ ನಾಯಕ,  ಪರಮೇಶ್ವರ್ ಗೆ ಗೃಹ ಸಚಿವ ಸ್ಥಾನಕ್ಕೆ ಕೊಕ್ ಕೊಟ್ಟಿದ್ದು ಸರಿಯಲ್ಲ ಎನ್ನುವ ರೇವಣ್ಣ ಹೇಳಿಕೆಗೆ ಪ್ರತಿಕ್ರಿಯೆ ನೀಡಿದರು.

ಮಂತ್ರಿಗಿರಿ ನನಗೆ ಪುಟಗೋಸಿ.. ಬಹಿರಂಗವಾಗಿ ಬನ್ನಿ ಕಾಂಗ್ರೆಸ್‌ಗೆ ರೇವಣ್ಣ ಸವಾಲ್!

ಸಮ್ಮಿಶ್ರ ಸರ್ಕಾರ ಸುಭದ್ರ ಆಗಿದೆ. ನಮ್ಮವರನ್ನು ಸೆಳೆಯುವ ಪ್ರಯತ್ನವನ್ನು ಬಿಜೆಪಿ ಮಾಡುತ್ತಿದೆ. ಅದರಲ್ಲಿ ಬಿಜೆಪಿ ಸಫಲ ಆಗಲ್ಲ. ರಮೇಶ್ ಜಾರಕಿಹೊಳಿ ಬಹಳ ವರ್ಷಗಳಿಂದ ಕಾಂಗ್ರೆಸ್ ಜೊತೆ ಇದ್ದಾರೆ. ಬಹಳ ಜನರು ಇಂದಿರಾ ಗಾಂಧಿ ಸೋನಿಯಾ ಗಾಂಧಿ ಹೆಸರು ಹೇಳಿ ಟಿಕೆಟ್ ಪಡೆದವರಿದ್ದಾರೆ. ಅವರು ಯಶಸ್ಸು ಕೂಡ ಕಂಡಿದ್ದಾರೆ. ರಮೇಶ್ ಜಾರಕಿಹೊಳಿಗೆ ಪಕ್ಷ ಸಾಕಷ್ಟು ನೀಡಿದೆ. ಅವರು ಪಕ್ಷ ಬಿಡಲ್ಲ , ದ್ರೋಹ ಮಾಡಲ್ಲ ಎನ್ನುವ ನಂಬಿಕೆ ಇದೆ ಎಂದರು.

ಮುಂಬಬಡ್ತಿ ವಿಚಾರದಲ್ಲಿ ನನಗೆ ಹೆಚ್ಚಿನ ಮಾಹಿತಿ ಇಲ್ಲ. ಮಹಘಟ ಬಂದನ್‌ಗೆ ಸಂಬಂಧಿಸಿ ರಾಹುಲ್ ಜೊತೆ ದೇವೆಗೌಡರ ಮಾತನಾಡುತ್ತೇನೆ ಎಂದಿರೋದು ನನ್ನ ಗಮನಕ್ಕೆ ಬಂದಿಲ್ಲ. ಅವರಿಬ್ಬರ ನಡುವೆ ಏನು ಮಾತುಕತೆ ಆಗಿದೆ ಎನ್ನೋದು ಗೊತ್ತಿಲ್ಲ. ಹೈಕಮಾಂಡ್ ಆ ಬಗ್ಗೆ ಚರ್ಚೆ ಮಾಡಲಿದೆ ಎಂದರು.

ಜೆಡಿಎಸ್ ಲೋಕಸಭೆಗೆ 12 ಸೀಟ್ ಕೇಳುತ್ತಿರುವ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಖರ್ಗೆ, ಸಹಜವಾಗಿ ಸೀಟ್ ಕೇಳ್ತಾರೆ. ಲೋಕಸಭೆಗೆ ಜ್ಯಾತ್ಯತೀತ ಶಕ್ತಿಗಳು ಒಂದಾಗಬೇಕು. ಈಗ ನಾನು ಪ್ರತಿಕ್ರಿಯೆ ನೀಡಿ ಮತ್ತೊಂದು ರೀತಿಯ ಚರ್ಚೆಗೆ ಆಸ್ಪದ ನೀಡಲ್ಲ.  ಸೀಟು ಹಂಚಿಕೆ ಹೈಕಮಾಂಡ್ ಚರ್ಚೆ ಮಾಡುತ್ತದೆ ಎಂದು ಹೇಳಿದರು.