ಬೆಂಗಳೂರು[ಜು. 13] ರಿವರ್ಸ್ ಆಪರೇಶನ್ ಮಾತನಾಡುತ್ತಿದ್ದ ದೋಸ್ತಿ ಪಡೆಯವರು ಶನಿವಾರ ಅಖಾಡಕ್ಕೆ ಧುಮುಕಿದ್ದರು. ರಾಜೀನಾಮೆ ಹಿಂದಕ್ಕೆ ಪಡೆಯುವಂತೆ ಶನಿವಾರ ಮುಂಜಾನೆಯಿಂದಲೂ ಎಂಟಿಬಿಯನ್ನು ಕಾಂಗ್ರೆಸ್ ನಾಕರು ಭೇಟಿಯಾಗುತ್ತಲೇ ಇದ್ದರು.

ಕಾಂಗ್ರೆಸ್: ರಾಜೀನಾಮೆ ಹಿಂಪಡೆಯಲು ಎಂಟಿಬಿ ನಾಗರಾಜ್  ಜತೆ ಡಿಕೆ ಶಿವಕುಮಾರ್, ಸಿದ್ದರಾಮಯ್ಯ, ಸಿಎಂ ಕುಮಾರಸ್ವಾಮಿ ಮಾತುಕತೆ. ರಾತ್ರಿ ವೇಳೆಗೆ ಸೆಕೆಂಡ್ ರೌಂಡ್ ಮಾತುಕತೆ. ಕೊನೆಗೂ ಅಡ್ಡಗೋಡೆ ಮೇಲೆ ದೀಪವಿಟ್ಟ ಹೊಸಕೋಟೆ ಶಾಸಕ. ಪಕ್ಷದಲ್ಲೇ ಉಳಿದುಕೊಂಡಿರುವ ಕಾಂಗ್ರೆಸ್ ಶಾಸಕರು ದೇವನಹಳ್ಳಿ ಸಮೀಪದ ರೆಸಾರ್ಟ್ ನಲ್ಲಿ ಇದ್ದು ಹಿರಿಯ ನಾಯಕರು ಭೇಟಿ ಮಾಡಿ ಬರುತ್ತಿದ್ದಾರೆ.

ಬಿಗ್ ಬ್ರೆಕಿಂಗ್: ಎಂಟಿಬಿ ನಾಗರಾಜ್ ರಾಜೀನಾಮೆ ವಾಪಸ್, ಆದ್ರೆ ಒಂದ್ ಕಂಡಿಶನ್!

ಅತೃಪ್ತರು: ರಾಜೀನಾಮೆ ಕೊಟ್ಟು ಹೋಗಿರುವ ಶಾಸಕರು ಮುಂಬೈನ ಖಾಸಗಿ ಹೊಟೆಲ್ ನಲ್ಲಿ ಉಳಿದುಕೊಂಡಿದ್ದಾರೆ. ಪಕ್ಷೇತರರು ಸಹ ಅಲ್ಲೇ ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದಾರೆ.

ಬಿಜೆಪಿ : ಶಾಸಕರು ಬೆಂಗಳೂರಿನ ಯಲಹಂಕ ಸಮೀಪದಲ್ಲಿ ತಮ್ಮ ವಾಸ್ತವ್ಯ ಮಾಡಿಕೊಂಡಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ಶನಿವಾರ ಅಲ್ಲಿಗೆ ಭೇಟಿ ನೀಡಿ ಯೋಗಕ್ಷೇಮ ವಿಚಾರಣೆ ಮಾಡಿಕೊಂಡು ಬಂದಿದ್ದಾರೆ.

ಜೆಡಿಎಸ್:  ಇನ್ನು  ಜೆಡಿಎಸ್ ಶಾಸಕರಿಗೆ ನಂದಿ ಗಿರಿಧಾಮದ ಸಮೀಪದಲ್ಲಿನ ರೆಸಾರ್ಟ್ ನಲ್ಲಿಯೇ ಉಳಿದುಕೊಂಡಿದ್ದು ಮಾಜಿ ಪ್ರಧಾನಿ ದೇವೇಗೌಡ ಶಾಸಕರ ವಿವರಣೆ ಪಡೆದುಕೊಂಡಿದ್ದಾರೆ.

ಸುಧಾಕರ್ ದೆಹಲಿಗೆ: ರಾಜೀನಾಮೆ ನೀಡಿದ್ದ ಚಿಕ್ಕಬಳ್ಳಾಪುರ ಶಾಸಕ ಡಾ. ಸುಧಾಕರ್ ದೆಹಲಿಗೆ ತೆರಳಿದ್ದಾರೆ ಎಂದು  ವರದಿಯಾಗಿದ್ದರೂ ಅವರು ಅತೃಪ್ತರ  ಜತೆ ಸೇರಿಕೊಳ್ಳಲು ಮುಂಬೈಗೆ ಹೋಗಿದ್ದಾರೆ ಎನ್ನಲಾಗಿದೆ. ಒಟ್ಟಿನಲ್ಲಿ ಸುಧಾಕರ್ ಬೆಂಗಳೂರನ್ನು ಬಿಟ್ಟಿದ್ದಾರೆ.