ಬೆಂಗಳೂರು[ಜು. 24]  ರಾಜ್ಯದಲ್ಲಿ ರಾಜಕೀಯ ಅಸ್ಥಿರತೆ ಮುಂದುವರಿಯಲಿದೆ ಎಂದು ನಿರ್ಗಮಿತ ಸಿಎಂ ಕುಮಾರಸ್ವಾಮಿ ಸುಳಿವು ನೀಡಿದ್ದಾರೆ.

ರಾಜ್ಯದಲ್ಲಿ ಮುಂದೆ ಏನೂ ಬೇಕಾದರೂ ಆಗಬಹುದು. ಯಾರೂ ಊಹಿಸದಂತೆ ಬೆಳವಣಿಗೆ ನಡೆಯಬಹುದು. ಯಡಿಯೂರಪ್ಪ ಸರ್ಕಾರವೂ ಸುಗಮವಾಗಿ ನಡೆಯಲ್ಲ ಎಂಬ ಸುಳಿವು ಕೊಟ್ಟಿದ್ದು ಹೊಸ ರಾಜಕೀಯ ಚರ್ಚೆಗೆ ವೇದಿಕೆ ಮಾಡಿದೆ.

ವಿಶ್ವಾಸಮತಕ್ಕೆ ಗೈರಾಗಿದ್ದ ಕೈ ಶಾಸಕನಿಗೆ ಬಿಗ್ ರಿಲೀಫ್, ಕೇಸು ಖುಲಾಸೆ

ಅತೃಪ್ತರನ್ನು ನಂಬಿಕೊಳ್ಳಲು ಸಾಧ್ಯವೇ? ನಮಗೆ ಈಗ ಕೈಕೊಟ್ಟು ಹೋದವರು ಮುಂದೆ ನಿಮಗೆ ಕೈ ಕೊಡುವುದಿಲ್ಲ ಎಂಬ ಗ್ಯಾರಂಟಿ ಏನು? ಎಂಬ ದಾಟಿಯಲ್ಲಿ ಸಿಎಂ ಮಾತನಾಡಿದರು. ರಾಜೀನಾಮೆ ಕೊಟ್ಟ ಶಾಸಕರು ಇಷ್ಟು ದಿನ ಇದ್ದ ಪಕ್ಷವನ್ನೇ ತೊರೆದಿದ್ದಾರೆ..ಮುಂದೆ ನಿಮಗೂ ಅವರ ಬಿಸಿ ತಾಗಲಿದೆ ಎಂಬ ಎಚ್ಚರಿಕೆ ಮಾತಿನ ಹಿಂದೆ ಇತ್ತು.

ರಾಜಕೀಯ ಬೆಳವಣಿಗೆಗಳ ಆಟ ಮುಗಿದಿಲ್ಲ. ಒಂದು ವೇಳೆ ಬಿಎಸ್ವೈ ಪ್ರಮಾಣ ವಚನ ತೆಗೆದುಕೊಂಡರೂ ಮತ್ತೊಮ್ಮೆ ವಿಶ್ವಾಸ ಮತ ಸಾಬೀತು ಮಾಡಬೇಕಾಗಿದೆ. ಅಂದು ಸಹ 20 ಜನರೂ ಗೈರಾದರೆ ಮಾತ್ರ ಬಿಎಸ್‌ವೈ ಸೇಫ್!