ಬೆಂಗಳೂರು[ಜು.23]: ಅತೃಪ್ತ ಶಾಸಕರು ಅವರು ಹೇಳಿಕೊಂಡಿರುವಂತೆ ಮುಂಬೈ ರೆಸಾರ್ಟ್‌ನಲ್ಲಿ ಖುಷಿಯಾಗಿಲ್ಲ. ಖುಷಿಯಾಗಿದ್ದಿದ್ದರೆ ಅವರು ಇಲ್ಲೇ ಇರಬಹುದಿತ್ತು. ಇಲ್ಲೇನು ಮುಳ್ಳು ಚುಚ್ಚಿಕೊಂಡಿತ್ತಾ ಎಂದು ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಖಾರವಾಗಿ ಪ್ರಶ್ನಿಸಿದ್ದಾರೆ.

ಕರ್ನಾಟಕ ರಾಜಕಾರಣದಲ್ಲಿ ಅಲ್ಲೋಲ ಕಲ್ಲೋಲ: ಎಲ್ಲಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ

ಸೋಮವಾರ ಸದನದಲ್ಲಿ ಪಾಲ್ಗೊಳ್ಳುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅತೃಪ್ತ ಶಾಸಕರು ಬೆಂಗಳೂರಿಗೆ ಬಂದರೆ ಅವರು ನಮ್ಮ ಪರವಾಗಿಯೇ ಇರುತ್ತಾರೆ ಎಂದರು.

ಸದನದಲ್ಲಿ ವಿಶ್ವಾಸಮತ ಯಾಚನೆಗೆ ಅವಕಾಶ ನೀಡುವ ತೀರ್ಮಾನ ಸ್ಪೀಕರ್‌ ವಿವೇಚನೆಗೆ ಬಿಟ್ಟಿದ್ದು. ವಿಶ್ವಾಸಮತ ಯಾಚನೆ ಮಾಡ್ತೀವಿ ಎಂದು ಸದನದಲ್ಲಿ ಹೇಳಿದ್ದೇವೆ. ಅದರಂತೆ ಸ್ಪೀಕರ್‌ ತೀರ್ಮಾನಿಸುತ್ತಾರೆ. ವಿಪ್‌ ಜಾರಿಗೆ ಸಂಬಂಧಿಸಿದಂತೆ ನಮ್ಮ ಹಕ್ಕು ಚ್ಯುತಿಯಾಗುವ ಬಗ್ಗೆ ಕಾಂಗ್ರೆಸ್‌ನಿಂದ ಈಗಾಗಲೇ ಸುಪ್ರೀಂಕೋರ್ಟ್‌ನಲ್ಲಿ ದಾವೆ ಹೂಡಲಾಗಿದೆ. ಮಂಗಳವಾರ ಆ ಅರ್ಜಿ ವಿಚಾರಣೆಗೆ ಬರಲಿದೆ ಎಂದು ತಿಳಿಸಿದರು.