ಬೆಂಗಳೂರು[ಜು.23]: ರಾಜ್ಯ ರಾಜಕೀಯ ಹೈಡ್ರಾಮಾ ಮೂರು ವಾರಗಳಾದರೂ ಕೊನೆಯಾಗಿಲ್ಲ. ದೋಸ್ತಿ ನಾಯಕರು ಒಂದೆಡೆ ಮುಂಬೈ ಬಿಟ್ಟು ಮರಳಿ ಬರಲು ಕೆಳುತ್ತಿಲ್ಲ. ಇತ್ತ ಸಿಎಂ ಕುಮಾರಸ್ವಾಮಿ ವಿಶ್ವಾಸಮತ ಮಂಡಿಸಲು ಮತ್ತಷ್ಟು ವಿಳಂಬ ಮಾಡುತ್ತಿದ್ದಾರೆ. ಹೀಗಿರುವಾಗ ಮಾಜಿ ಸಿಎಂ ಹಾಗೂ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಬಿಜೆಪಿ ನಾಯಕರಿಗೆ ಗುಡ್ ಲಕ್ ಎಂದು ಹೇಳಿರುವ ಪ್ರಸಂಗ ನಡೆದಿದೆ.

ಕರ್ನಾಟಕ ರಾಜಕಾರಣದಲ್ಲಿ ಅಲ್ಲೋಲ ಕಲ್ಲೋಲ: ಎಲ್ಲಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ

ಹೌದು ವಿಧಾನಸೌಧದಲ್ಲಿ ಸಿದ್ದರಾಮಯ್ಯ ಹಾಗೂ ಬಿಜೆಪಿ ನಾಯಕರು ಮುಖಾಮುಖಿಯಾಗಿದ್ದರು. ಈ ವೇಳೆ ಕಾರ್ಕಳ ಕ್ಷೇತ್ರದ ಬಿಜೆಪಿ ಶಾಸಕ ಸುನೀಲ್ ಕುಮಾರ್ ಹಾಗೂ ಯಲಹಂಕ ಬಿಜೆಪಿ ಶಾಸಕ ಎಸ್.ಆರ್.ವಿಶ್ವನಾಥ್ ಕೈಕುಲುಕಿದ ಸಿದ್ದರಾಮಯ್ಯ ಗುಡ್ ಲಕ್ ಎಂದಿದ್ದಾರೆ.

ಈಗಾಗಲೇ ಸಿದ್ದರಾಮಯ್ಯ ರಾಜೀನಾಮೆ ನೀಡುವ ಮಾತುಗಳು ಭಾರೀ ಸದ್ದು ಮಾಡುತ್ತಿವೆ. ಹೀಗಿರುವಾಗ ಸಿದ್ದರಾಮಯ್ಯ ಬಿಜೆಪಿ ನಾಯಕರ ಕೈ ಕುಲುಕಿರುವುದು ಸರ್ಕಾರ ಪತನಗೊಳ್ಳುವುದು ಖಚಿತವೆಂಬಂತಿದೆ.