ಬೆಂಗಳೂರು(ಜು. 19)  ಕೆಪಿಸಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲು ಏರಿದೆ.  ಸುಪ್ರೀಂಕೋರ್ಟ್ ತೀರ್ಪಿನ ಬಗ್ಗೆ ಸ್ಪಷ್ಟನೆ ಕೋರಿ ಕೆಪಿಸಿಸಿ ಅರ್ಜಿ  ಹಾಕಿದೆ.

ಅತೃಪ್ತ ಶಾಸಕರ ಅರ್ಜಿ ಸಂಬಂಧ ನೀಡಿದ್ದ ಮಧ್ಯಂತರ ತೀರ್ಪುಗೆ  ಸ್ಪಷ್ಟನೆ ನೀಡಲು ಕಾಂಗ್ರೆಸ್ ಪಕ್ಷವನ್ನು ಪ್ರತಿವಾದಿಯಾಗಿಸಬೇಕು ಎಂದು ಸುಪ್ರೀಂಕೋರ್ಟ್ ಗೆ ಕೆಪಿಸಿಸಿ ಅಧ್ಯಕ್ಷ  ದಿನೇಶ್ ಗುಂಡೂರಾವ್ ಹೆಸರಿನಲ್ಲಿ ಅರ್ಜಿ ಸಲ್ಲಿಕೆಯಾಗಿದೆ.

10ನೇ ಶೆಡ್ಯೂಲ್ ಪ್ರಕಾರ ವಿಪ್ ಜಾರಿ ವಿಚಾರಕ್ಕೆ ಗೊಂದಲವಿದೆ ಜುಲೈ 17ರಂದು ಸುಪ್ರೀಂಕೋರ್ಟ್ ತೀರ್ಪು ಗೊಂದಲ ತಂದಿದೆ ಎಂದು ಹೇಳುತ್ತ ಮತ್ತೊಂದು ಸುತ್ತಿನ ಕಾನೂನು ಹೋರಾಟಕ್ಕೆ ಮುಂದಾಗಿದೆ.

ಮುಂಬೈಯಿಂದ ಸಂದೇಶ: ‘ಬಂಡಾಯ ಶಾಸಕರಿಗೆ ಭಾರೀ ಆಘಾತ!’

ಪಕ್ಷಾಂತರ ನಿಷೇಧ ಕಾಯಿದೆ ಅಡಿಯಲ್ಲಿನ ನಮ್ಮ ಹಕ್ಕು ಕಸಿದುಕೊಳ್ಳುವಂತಹ ವಾತಾವರಣ ಸೃಷ್ಟಿಯಾಗಿದೆ.  ಅತೃಪ್ತರು ಅಧಿವೇಶನಕ್ಕೆ ಹಾಜರಾಗುವಂತೆ ಒತ್ತಡ ಹೇರಬೇಕಿಲ್ಲ ಎಂಬ ಆದೇಶ ನಮ್ಮ ಹಕ್ಕಿಗೆ ಚ್ಯುತಿ ತಂದಿದ್ದು ಇನ್ನೊಮ್ಮೆ ಪರಾಮರ್ಶೆ ಮಾಡಬೇಕು. ಜತೆಗೆ ಕಾಮಗ್ರೆಸ್ ಪಕ್ಷವನ್ನು ಪ್ರತಿವಾದಿಯಾಗಿ ಇರಿಸಬೇಕು ಎಂದು ಅರ್ಜಿಯಲ್ಲಿ ಹೇಳಲಾಗಿದೆ.