Asianet Suvarna News Asianet Suvarna News

'ನನಗೆ ದೈವಾನುಗ್ರಹ ಇದೆ, ನಿಂಬೆಹಣ್ಣು ಬೇಕಾಗಿಲ್ಲ'

ನನಗೆ ದೈವಾನುಗ್ರಹ ಇದೆ, ನಿಂಬೆಹಣ್ಣು ಬೇಕಾಗಿಲ್ಲ| ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇನೆ| ನನ್ನ ಇಲಾಖೆಯಲ್ಲಿ ಏನು ಕೆಲಸ ಮಾಡಬೇಕೋ ಮಾಡಿದ್ದೇನೆ| ವಿಧಾನಸೌಧದಲ್ಲಿ ಪಿಡಬ್ಲ್ಯೂಡಿ ಸಚಿವ ಎಚ್.ಡಿ.ರೇವಣ್ಣ ಹೇಳಿಕೆ| 

Karnataka Political Crisis HD Revanna Clarification On The Allegations Against Him
Author
Bangalore, First Published Jul 17, 2019, 3:05 PM IST

ಬೆಂಗಳೂರು[ಜು.17]: ಕಳೆದ ಎರಡು ವಾರಗಳಿಂದ ರಾಜಕೀಯ ಹೈಡ್ರಾಮಾ ನಡೆಯುತ್ತಿದೆ. ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿರುವ 15 ಅತೃಪ್ತ ಶಾಸಕರು ಮುಂಬೈನಲ್ಲಿ ಬೀಡು ಬಿಟ್ಟಿದ್ದಾರೆ. ಅದೆಷ್ಟೇ ಮನವೊಲಿಸಲು ಯತ್ನಿಸಿದರೂ ಅತೃಪ್ತ ಶಾಸಕರು ಮಾತ್ರ ಹಠ ಬಿಟ್ಟಿಲ್ಲ. ಅತೃಪ್ತ ಶಾಸಕರಲ್ಲಿ ಬಹುತೇಕ ಮಂದಿ ರೇವಣ್ಣ ಕುರಿತಾಗಿ ಸಮಾಧಾನ ವ್ಯಕ್ತಪಡಿಸಿದ್ದರು. ಲೋಕೋಪಯೋಗಿ ಸಚಿವ ಯಾವುದೇ ಕೆಲಸ ಮಾಡಲು ಬಿಡುತ್ತಿಲ್ಲ ಎಂಬುವುದು ಅತೃಪ್ತ ಶಾಸಕರು ಹಾಗೂ ಬಿಜೆಪಿ ನಾಯಕರ ಮಾತಾಗಿತ್ತು. ಸದ್ಯ ತನ್ನ ಬಗ್ಗೆ ಕೇಳಿ ಬಂದಿರುವ ಈ ಆರೋಪಕ್ಕೆ ಸಚಿವ ಎಚ್. ಡಿ. ರೇವಣ್ಣ ಪ್ರತಿಕ್ರಿಯಿಸಿದ್ದಾರೆ.

"

ಸುಪ್ರೀಂ ಮಹಾ ತೀರ್ಪು: ರಾಜೀನಾಮೆ ಸ್ವೀಕಾರ, ಸ್ಪೀಕರ್‌ಗಿಲ್ಲ ಒತ್ತಡ

ಲೋಕೋಪಯೋಗಿ ಸಚಿವ ಬೇರೆ ಇಲಾಖೆಯಲ್ಲೂ ಹಸ್ತಕ್ಷೇಪ ಮಾಡುತ್ತಾಋಎ ಎಂಬ ವಿಚಾರಕ್ಕೆ ಸಂಭಮಧಿಸಿದಂತೆ ಮಾತನಾಡಿದ ರೇವಣ್ಣ 'ಬೇರೆ ಇಲಾಖೆಯಲ್ಲಿ ನಾನು ಹಸ್ತಕ್ಷೇಪ ಮಾಡಿಲ್ಲ. ನನ್ನ ಇಲಾಖೆ ಕೆಲಸ ನಾನು ಮಾಡಿದ್ದೇನೆ. ನನ್ನ ಮೇಲೆ ಇಲ್ಲಿಯವರಿಗೆ ಯಾವುದಾದರೂ ಆರೋಪ ಇತ್ತಾ? ಮುಂಬೈಗೆ ಹೋದ ಮೇಲೆ ಈ ರೀತಿಯಾಗಿ ಆರೋಪಿಸಿದ್ದಾರೆ' ಎಂದು ಸ್ಪಷ್ಟಪಡಿಸಿದ್ದಾರೆ. 

ನಿಂಬೆಹಣ್ಣು ಬೇಕಿಲ್ಲ

ಇದೇ ಸಂದರ್ಭದಲ್ಲಿ ಟೆಂಪಲ್ ರನ್ ವಿಚಾರವಾಗಿಯೂ ರೇವಣ್ಣ ಪ್ರತಿಕ್ರಿಯಿಸಿದ್ದಾರೆ. 'ನನಗೆ ದೈವಾನುಗ್ರಹ ಇದೆ. ನನಗೆ ದೈವಾನುಗ್ರಹ ಇರುವುದರಿಂದ ನಿಂಬೆಹಣ್ಣು ಬೇಕಾಗಿಲ್ಲ. ನಮ್ಮ ಕುಲದೇವರು ಈಶ್ವರ, ರಂಗನಾಥನ ಆಶೀರ್ವಾದ ಇದೆ. ದೇವರ ಆಶೀರ್ವಾದ ಇರ್ಬೇಕಾದ್ರೆ ನನಗೆ ನಿಂಬೆಹಣ್ಣು ಬೇಕಿಲ್ಲ' ಎಂದಿದ್ದಾರೆ.

ಕರ್ನಾಟಕ ರಾಜಕಾರಣದಲ್ಲಿ ಅಲ್ಲೋಲ ಕಲ್ಲೋಲ: ಎಲ್ಲಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ

ಎಚ್. ಕೆ ಪಾಟೀಲ್ ಹೇಳಿಕೆಗೆ ಪ್ರತಿಕ್ರಿಯಿಸಿರುವ ರೇವಣ್ಣ 'ಸುಪ್ರೀಂ ಕೋರ್ಟ್ ತೀರ್ಪನ್ನ ತಪ್ಪಾಗಿ ಅರ್ಥೈಸಲಾಗ್ತಿದೆ‌. ಸುಪ್ರೀಂ ಕೋರ್ಟ್ ನಮ್ಮ ವಿಧಾನ ಸಭೆಯ ಸಾರ್ವಭೌಮತ್ವದಕ್ಕೆ ರಕ್ಷಣೆ ಕೊಟ್ಟಿದ್ದಾರೆ. ಸ್ಪೀಕರ್ ಅಧಿಕಾರದಲ್ಲಿ ಹಸ್ತಕ್ಷೇಪ ಮಾಡಿಲ್ಲ. ವಿಧಾನ ಸಭಾ ಅಧ್ಯಕ್ಷರ ಅಧಿಕಾರವನ್ನ ಎತ್ತಿ ಹಿಡಿದಿದ್ದಾರೆ.  ವಿಪ್ ಉದ್ದೇಶವನ್ನ ಮೊಟಕುಗೊಳಿಸಿದ್ದಾರೆ. ಪಕ್ಷಾಂತರ ಕಾಯ್ದೆಯ ಸದುದ್ದೇಶ ಆಶಯಯಕ್ಕೆ ಸುಪ್ರೀಂ ಕೋರ್ಟ್ ತೀರ್ಪು ಸ್ವಲ್ಪ ಮಟ್ಟಿಗೆ ಘಾಸಿಗೊಳಿಸಿದೆ. ಮುಂದೆ ಸುಪ್ರೀಂ ಕೋರ್ಟ್ ಅದನ್ನ ಹೇಗೆ ಸರಿಪಡಿಸುತ್ತೆ ಕಾದುನೋಡಬೇಕು' ಎಂದಿದ್ದಾರೆ. 
 

Follow Us:
Download App:
  • android
  • ios