ಬೆಂಗಳೂರು[ಜು.22] :  ಕಳೆದ ಗುರುವಾರ ಮಂಡನೆಯಾಗಿದ್ದ ಮುಖ್ಯಮಂತ್ರಿ ಎಚ್. ಡಿ.ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರದ ವಿಶ್ವಾಸಮತ ನಿರ್ಣಯದ ಮೇಲಿನ ಚರ್ಚೆ ಸೋಮವಾರ ವಿಧಾನಸಭೆಯಲ್ಲಿ ಮುಂದುವರೆಯಲಿದ್ದು, ಸೋಮವಾರವೇ ಮುಗಿಯುತ್ತ ದೆಯೇ ಅಥವಾ ಮತ್ತೆ ಮುಂದೂಡಿಕೆಯಾಗಲಿದೆಯೇ ಎಂಬುದು ಕುತೂಹಲಕರವಾಗಿದೆ.

ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಮಂಡಿಸಿರುವ ವಿಶ್ವಾಸಮತ ಯಾಚನೆ ನಿರ್ಣಯದ ಮೇಲಿನ ಚರ್ಚೆಯನ್ನು ಸೋಮವಾರ ಅಂತ್ಯಗೊಳಿಸದೆ ಮುಂದೂಡುವ ಪ್ರಯತ್ನ ಆಡಳಿತಾರೂಢ ಪಕ್ಷಗಳಲ್ಲಿ ನಡೆಯುತ್ತಿದೆ.

ಬುಧವಾರದವರೆಗೆ ಚರ್ಚೆ ಮುಂದೂಡುವ ಕುರಿತು ತಾಂತ್ರಿಕ ಕಾರಣಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ಉಭಯ ಪಕ್ಷಗಳ ಉನ್ನತ ಮೂಲಗಳು ತಿಳಿಸಿವೆ.