ಬೆಂಗಳೂರು[ಜು.20]: ಅತೃಪ್ತ ಶಾಸಕರು ವಿಶೇಷ ವಿಮಾನದಲ್ಲಿ ಹೋಗಿದ್ದಷ್ಟೇ ಗೊತ್ತು. ಬಳಿಕ ಅವರಲ್ಲಿ ಯಾರು ಜೀವಂತವಾಗಿದ್ದಾರೋ, ಯಾರು ಸತ್ತಿದ್ದಾರೋ ತಿಳಿಯುತ್ತಿಲ್ಲ. ನೀವು ಯಾರಾದರೂ ಮುಖ್ಯಮಂತ್ರಿ ಯಾಗಿ. ಆದರೆ ಅದಕ್ಕೂ ಮುನ್ನ ಒಮ್ಮೆ ನಮಗೆ ಅತೃಪ್ತರನ್ನು ತೋರಿಸಿ ಎಂದು ಬಸವಕಲ್ಯಾಣದ ಕಾಂಗ್ರೆಸ್ ಶಾಸಕ ನಾರಾ ಯಣರಾವ್ ಹೇಳಿದ ಮಾತು ಸದನದಲ್ಲಿದ್ದ ಸದಸ್ಯರ ನಗುವಿಗೆ ಕಾರಣವಾಯಿತು.

ಕರ್ನಾಟಕ ರಾಜಕಾರಣದಲ್ಲಿ ಅಲ್ಲೋಲ ಕಲ್ಲೋಲ: ಎಲ್ಲಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ

ವಿಮಾನ ಏರಿ ಹೋದವರು ಎಲ್ಲಿ ಹೋದರೋ ಗೊತ್ತಾಗ್ತಿಲ್ಲ, ಜೀವಂತವಾಗಿ ದ್ದಾರೋ ಇಲ್ವೋ ಅದೂ ತಿಳಿಯುತ್ತಿಲ್ಲ. ಯಾರಾದರೂ ಮುಖ್ಯಮಂತ್ರಿ ಆಗಿ ಅವರನ್ನೊಮ್ಮೆ ನಮಗೆ ತೋರಿಸಿ. ಅವರೇನೋ ಹೋಗೋದು ಹೋದರು. ಈಗ ಜನ ನಮ್ಮನ್ನ ಅನುಮಾನದಿಂದ ನೋಡುತ್ತಿದ್ದಾರೆ. ಅಷ್ಟೊಂದು ಹಣ ಕೊಡುವ ಕಾಲಕ್ಕೆ ಅದ್ಯಾಕೆ ಬಿಟ್ಟು ಬರ‌್ತೀರಿ ಎನ್ನುತ್ತಿದ್ದಾರೆ. ನನಗೇನಾದ್ರೂ 45 ಕೋಟಿ ಯಾರಾದರೂ ಕೊಟ್ಟರೆ ಅದನ್ನು ಎಲ್ಲಿ ಇಡಬೇಕು ಅಂತಾನೂ ನನಗೆ ಗೊತ್ತಿಲ್ಲ. ಪ್ಯಾನ್‌ ಕಾರ್ಡೂ ಮಾಡಿಸಿಲ್ಲ. ಮುಖ್ಯಮಂತ್ರಿ ಕುಮಾರಸ್ವಾಮಿ, ಡಿ.ಕೆ.ಶಿವಕುಮಾರ್, ವಿಪಕ್ಷ ನಾಯಕ ಯಡಿಯೂರಪ್ಪ ಅಂತಹವರು ನೂರು ಸಲ ಚುನಾವಣೆ ನಡೆದರೂ ಹೆದರುವುದಿಲ್ಲ. ನಮ್ಮಂತವರು ಏನು ಮಾಡುವುದು, ನನ್ನ ಹೆಸರಲ್ಲಿ ಒಂದು ಗುಂಟೆ ಜಮೀನೂ ಇಲ್ಲ. ಕದ್ದುಮುಚ್ಚಿ ತಗೊಂಡ್ರೆ ಮತ್ತೆ ಜೈಲಿಗೆ ಬೇರೆ ಹೋಗಬೇಕಾಗುತ್ತೆ ಎಂದಾದ ಸಭೆ ನಗೆಗಡಲಲ್ಲಿ ತೇಲಿತು.

ದೇವೇಗೌಡರ ಇಚ್ಛೆಗೆ ವಿರುದ್ಧ ನಡೀಬೇಡಿ:

ಮಾಜಿ ಪ್ರಧಾನಿ ದೇವೇಗೌಡ ಅವರಿಗೆ ಎಸ್.ಆರ್.ಬೊಮ್ಮಾಯಿ ಅವರು ಸಿಎಂ ಸ್ಥಾನದ ಕೊಡುಗೆ ನೀಡಿದಾಗ ಎಡಗಾಲಲ್ಲಿ ಒದ್ದು ನಾನು ಜನರಿಂದ ಆಯ್ಕೆಯಾಗಿ ಆ ಸ್ಥಾನಕ್ಕೆ ಬರುತ್ತೇನೆ ಎಂದು ಹೇಳಿದರು. ಆದರೆ, ಆ ಕುರ್ಚಿಗೊಸ್ಕರ ಅವರ ಮಗನಾದ ನೀವು ತಪ್ಪಾಗಿ ಒಮ್ಮೆ ಬಿಜೆಪಿ ಗೆಳೆತನ ಮಾಡಿದ ಪ್ರತಿಫಲವನ್ನು ನಾವು ಅನುಭವಿಸಬೇಕಾಗಿದೆ. ದೇವೇಗೌಡರ ಇಚ್ಛೆಗೆ ವಿರುದ್ಧವಾಗಿ ನಡೆಯಬೇಡಿ ಎಂದರು.