ಬೆಂಗಳೂರು [ಜು.22] :  ಸೋಮವಾರ ವಿಶ್ವಾಸಮತಯಾಚನೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಭಾನುವಾರ ಅತೃಪ್ತ ಶಾಸಕರನ್ನು ಮನವೊಲಿಸುವಕೆಲಸ ಯತ್ನ ನಡೆಸಿದರು. 

ರಾಜೀನಾಮೆ ನೀಡಿರುವ ಶಾಸಕ ಆನಂದ್‌ಸಿಂಗ್ ಅವರನ್ನು ಸಂಬಂಧಿಕರ ನೆರವಿನಿಂದ ಮನವೊಲಿಸುವ ಯತ್ನ ಮಾಡಲಾಯಿತು. ಮುಂಬೈನಲ್ಲಿರುವ ಶಾಸಕರ ಸಂಪರ್ಕಕ್ಕೂ ಯತ್ನಿಸಲಾಯಿತು. ಆಸ್ಪತ್ರೆಯಲ್ಲಿರುವ ಬಳ್ಳಾರಿ ಶಾಸಕ ನಾಗೇಂದ್ರರನ್ನು ಸದನಕ್ಕೆ ಕರೆತರಲು ಯೋಜಿಸಲಾಗಿದೆ. 

ಇನ್ನೊಂದೆಡೆ ತಟಸ್ಥರಾಗಿರುವುದಾಗಿ ಹೇಳಿದ್ದ ಬಿಎಸ್ಪಿ ಶಾಸಕ ಮಹೇಶ್ ಅವರಿಗೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪರವಾಗಿ ಮತ ಹಾಕುವಂತೆ ಬಿಎಸ್ಪಿ ವರಿಷ್ಠೆ ಮಾಯಾವತಿಯವರು ಸೂಚಿಸಿದ್ದಾರೆ.