ಬೆಂಗಳೂರು(ಅ. 10) ಮಾಧ್ಯಮಗಳಿಗೆ ನಿರ್ಬಂಧ ಹೇರಿರುವ ಸ್ಪೀಕರ್ ಕಾಗೇರಿ ಅವರನ್ನು ವಿಧಾನಸಭೆಯಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಕಿಚಾಯಿಸಿದ್ದಾರೆ.

ನಿಮ್ಗೆ ಸ್ಪೀಕರ್ ಆಗ್ತೀನಿ ಅಂತಾ ಗೊತ್ತಿತ್ತಾ..? ನಿಮ್ಗೆ ಸ್ಪೀಕರ್ ಆಗ್ತೀನಿ ಅಂತಾ ಗೊತ್ತಾಗಿದ್ದು  ನೀವು ಅಧಿಕಾರ ಸ್ವೀಕಾರ ಮಾಡುವ ದಿನವೇ.. ಪಾಪ‌ ನೀವು ಮಿನಿಸ್ಟರ್ ಆಗ್ಬೇಕು ಅಂತಾ ಅಂದ್ಕೊಂಡಿದ್ದೀರಿ ಎಂದು ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಕಾಲೆಳೆದಿದ್ದಾರೆ.

ಯತ್ನಾಳ್ ಬ್ಯಾಟ್, ಸಿದ್ದು ಬೌಂಡ್ರಿ: ಕಲಾಪದಲ್ಲಿ ಇಂದು ಕಂಡಿದ್ದು ನೋಡ್ರಿ!

ಪಾಪ ಅಶೋಕ್ ಮಾಜಿ ಡಿಸಿಎಂ, ಹಾಲಿ ಕಂದಾಯ ಸಚಿವ.. ಸಿ‌‌.ಟಿ.ರವಿ ಟೂರಿಸ್ಟ್ ಮಿನಿಸ್ಟರ್.. ಟೂರಿಸ್ಟ್ ಮಿನಿಸ್ಟರಾ ರವಿ..? ಎನ್ನುತ್ತಾ ಆಡಳಿತ ಪಕ್ಷದವರನ್ನು ತಮ್ಮದೇ ಶೈಲಿಯಲ್ಲಿ  ಟೀಕಿಸಿದರು.

ಯಡಿಯೂರಪ್ಪ ಅವರಿಗೆ ಯಾರು ಡಿಸಿಎಂ ಅನ್ನೋದೇ ಗೊತ್ತಿಲ್ಲ ಪಾಪ.. ಒಬ್ಬರು ಸೋತವರು ಡಿಸಿಎಂ, ಒಬ್ಬರು ಮೊದಲ ಬಾರಿಗೆ ಸಚಿವರಾದವರು ಡಿಸಿಎಂ, ಕಾರಜೋಳ ಡಿಸಿಎಂ ನಾನು ಒಪ್ತೀನಿ.. ಯಡಿಯೂರಪ್ಪ ಹೇಳಿದವರು ಒಂದಿಬ್ಬರು ಸಚಿವರಾಗಿದ್ದಾರೆ ಅಷ್ಟೇ.. ಉಳಿದವರು ಹೈಕಮಾಂಡ್ ಹೇಳಿದವರು ಸಚಿವರು ಎನ್ನುತ್ತ ಯಡಿಯೂರಪ್ಪ ವೀಕ್ ಸಿಎಂ ಎಂಬ ತಮ್ಮ ಮೊದಲಿನ ಹೇಳಿಕೆಯನ್ನು ಬೇರೆ ತೆರನಾಗಿ ವಿಧಾನಸೌಧದಲ್ಲಿಯೂ ಹೊರಗಿಟ್ಟರು.

ಚಳಿಗಾಲದ ಅಧಿವೇಶನ ಆರಂಭಕ್ಕೆ ಕೊನೆ ದಿನ ಕಾಂಗ್ರೆಸ್ ವಿಪಕ್ಷ ನಾಯಕರನ್ನಾಗಿ ಸಿದ್ದರಾಮಯ್ಯ ಅವರನ್ನು ಕಾಂಗ್ರೆಸ್ ಹೈಕಮಾಂಡ್ ಆಯ್ಕೆ ಮಾಡಿತ್ತು. ವಿಪಕ್ಷ ನಾಯಕರ ರೇಸ್ ನಲ್ಲಿ ಇದ್ದ ಪರಮೇಶ್ವರ ಮತ್ತು ಎಚ್‌ಕೆ ಪಾಟೀಲರನ್ನು ಹಿಂದಿಕ್ಕಿ ಸಿದ್ದರಾಮಯ್ಯ ಆಯ್ಕೆಯಾಗಿದ್ದರು.