ಉಡುಪಿ: ಕಾಪು ತಾಲೂಕಿನ ಕುತ್ಯಾರು ಗ್ರಾಮದ ಬಗ್ಗತೋಟ ಎಂಬಲ್ಲಿನ ನಿವಾಸಿ, ಸೌದಿ ಅರೇಬಿಯಾದಲ್ಲಿ ನರ್ಸ್ ಆಗಿದ್ದ ಹೆಝೆಲ್ ಜ್ಯೋತ್ಸ್ನಾ ಕ್ವಾಡ್ರಸ್ (30) ಎಂಬುವರು ನಿಗೂಢವಾಗಿ ಮೃತಪಟ್ಟ ಘಟನೆ ಜು.೨೧ರಂದು ನಡೆದಿದೆ. 

ಜ್ಯೋತ್ಸ್ನಾ ಅವರು ಸೌದಿ ಸರ್ಕಾರಿ ಆರೋಗ್ಯ ಇಲಾಖೆಯ ಆಸ್ಪತ್ರೆಯಲ್ಲಿ ದಾದಿಯಾಗಿ ಕಳೆದ 8 ವರ್ಷಗಳಿಂದಸೇವೆ ಸಲ್ಲಿಸುತ್ತಿದ್ದರು. 4 ವರ್ಷಗಳ ಹಿಂದೆಯಷ್ಟೇ ಅವರ ಮದುವೆಯಾಗಿತ್ತು. ಇತ್ತೀಚೆಗೆ ಊರಿಗೆ ಬಂದಿದ್ದು ಹೊಸ ಮನೆಯ ಪ್ರವೇಶ ಮಾಡಿ, ರಮ್ಜಾನ್ ರಜೆ ಕಳೆದು ಸೌದಿಗೆ ಮರಳಿದ್ದರು. 

ಅವರ ಪತಿ ಅಶ್ವಿನ್ ಮಥಾ ಯಸ್ ಕೂಡ ಹಿಂದೆ ಸೌದಿಯಲ್ಲಿ ಉದ್ಯೋಗಿಯಾಗಿದ್ದು, ಇದೀಗ ಊರಿನಲ್ಲಿದ್ದಾರೆ. 21ರಂದು ಆಕೆ ಮೃತಪಟ್ಟಿರುವುದಾಗಿ ಆಸ್ಪತ್ರೆಯಿಂದ ಅಶ್ವಿನ್ ಅವರಿಗೆ ಕರೆ ಬಂದಿದೆ. ಹೇಗೆ ಮೃತಪಟ್ಟಿದ್ದಾರೆ ಎಂಬ ಬಗ್ಗೆ ಯಾವುದೇ ಮಾಹಿತಿ ನೀಡುತ್ತಿಲ್ಲವೆಂದು ಅಶ್ವಿನ್ ನೋವು ವ್ಯಕ್ತಪಡಿಸಿದ್ದಾರೆ.