Asianet Suvarna News Asianet Suvarna News

ರೇವಣ್ಣ ಇದೇನಣ್ಣಾ? ಮುಂದುವರೆದಿದೆ ಸೂಪರ್ ಸಿಎಂ ದರ್ಬಾರ್!

ಮೈತ್ರಿ ಸರ್ಕಾರದಲ್ಲಿ ರೇವಣ್ಣ ದರ್ಬಾರ್ | ಯಾರ ಮಾತಿಗೂ ಬಗ್ಗುತ್ತಿಲ್ಲ ರೇವಣ್ಣ | PWD ಇಲಾಖಾ ಅಧಿಕಾರಿಗಳ ಏಕಾಏಕಿ ಎತ್ತಂಗಡಿ | 

Karnataka Minister H D Revanna again interferes government
Author
Bengaluru, First Published Oct 1, 2018, 10:02 AM IST

ಬೆಂಗಳೂರು (ಅ. 01): ಮೈತ್ರಿ ಸರ್ಕಾರದಲ್ಲಿ ಮತ್ತೆ ಸೂಪರ್​ ಸಿಎಂ ರೇವಣ್ಣ ದರ್ಬಾರ್ ಶುರುವಾಗಿದೆ. ​ ಯಾರು ಏನೇ ಹೇಳಿದ್ರೂ ಎಚ್​.ಡಿ.ರೇವಣ್ಣ ಖದರ್ ನಿಲ್ಲುತ್ತಿಲ್ಲ. ​

ಪಿಡಬ್ಲೂಡಿ ಇಲಾಖೆಯಲ್ಲಿ ಕಿರಿಯ ಇಂಜಿನಿಯರ್​ ಸೇರಿ 700 ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದೆ. ಪ್ರಥಮ ದರ್ಜೆ, ದ್ವಿತೀಯ ದರ್ಜೆ ಸಹಾಯಕರು, ಡಿ ಗ್ರೂಪ್ ನೌಕರರನ್ನು ಏಕಾಏಕಿ ವರ್ಗಾವಣೆ ಮಾಡಲಾಗಿದೆ.  ಜೂನ್-ಜುಲೈನಲ್ಲಿ ನಡೆಯಬೇಕಿದ್ದ ಸಾಮೂಹಿಕ ವರ್ಗಾವಣೆ ಈಗಲೇ ಆಗಿದ್ಯಾಕೆ ಎಂಬ ಪ್ರಶ್ನೆ ಎದ್ದಿದೆ. 

"

ರಾತ್ರೋ ರಾತ್ರಿ ಲೋಕೋಪಯೋಗಿ ಇಲಾಖೆಯಲ್ಲಿ ಅಧಿಕಾರಿಗಳ ಎತ್ತಂಗಡಿ ಮಾಡಲಾಗಿದೆ.  ದಿಢೀರ್​ ವರ್ಗಾವಣೆಗೆ ಇಂಜಿನಿಯರ್​ಗಳು ಹಾಗೂ ಸಿಬ್ಬಂದಿ ಗಲಿಬಿಲಿಗೊಂಡಿದ್ದಾರೆ.  ಸಚಿವ ರೇವಣ್ಣ ಕ್ರಮಕ್ಕೆ ಸಮ್ಮಿಶ್ರ ಸರ್ಕಾರದಲ್ಲಿ ಮತ್ತೆ ಗೊಂದಲ ಸೃಷ್ಟಿ ಸಾಧ್ಯತೆ ಇದೆ. 

Follow Us:
Download App:
  • android
  • ios