ಬೆಂಗಳೂರು :  ಶನಿವಾರ ಕೇರಳ ಕಡಲ ತೀರಕ್ಕೆ ಮುಂಗಾರು ಪ್ರವೇಶಿಸಿದೆ. ಮುಂಗಾರು ದುರ್ಬಲವಾಗಿರುವುದರಿಂದ ಜೂ.11ರ ಬಳಿಕ ರಾಜ್ಯಕ್ಕೆ ಮುಂಗಾರು ಪ್ರವೇಶವಾಗಲಿದೆ. 

ಆದರೆ ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತ ಉಂಟಾಗಿರುವುದರಿಂದ ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ನಿರೀಕ್ಷಿತ ಮಟ್ಟದ ಮಳೆಯಾಗುವುದು ಅನುಮಾನವಾಗಿದೆ. ಕೇವಲ ಕರಾವಳಿ ಹಾಗೂ ಮಳೆನಾಡು ಜಿಲ್ಲೆಗಳಲ್ಲಿ ಮಾತ್ರ ಹೆಚ್ಚಿನ ಪ್ರಮಾಣದ ಮಳೆಯಾಗುವ ಸಾಧ್ಯತೆಗಳಿವೆ. 

ಮುಂಗಾರು ಮಾರುತ ದುರ್ಬಲವಾಗಿರುವುದರಿಂದ ಪಶ್ಚಿಮ ಘಟ್ಟ ಪ್ರವೇಶವನ್ನು ದಾಟಿ ಒಳನಾಡು ಪ್ರವೇಶಿಸುವುದು ಅನುಮಾನವಾಗಿದೆ.