ಕಲಬುರಗಿ [ಜು.09] : ರಾಜ್ಯ ರಾಜಕಾರಣದಲ್ಲಿ ಹೈ ಡ್ರಾಮಾ ಮುಂದುವರಿದಿದೆ. ಹಲವರು ರಾಜೀನಾಮೆ ನೀಡಿದ್ದು, ಮಧ್ಯಂತರ ಚುನಾವಣೆ ನಡೆಯುವ ವಾತಾವರಣವಿದೆ ಎಂದು ಮಾಜಿ ಸಚಿವ ಮಾಲಿಕಯ್ಯ ಗುತ್ತೇದಾರ್ ಹೇಳಿದ್ದಾರೆ. 

ಕಲಬುರಗಿಯಲ್ಲಿ ಮಾತನಾಡಿದ ಅವರು ಕಲೆ ದಿನಗಳ ಹಿಂದಷ್ಟೇ ಲೋಕಸಭಾ ಚುನಾವಣೆ ಮುಕ್ತಾಯವಾಗಿದೆ. ಮತ್ತೊಂದು ಚುನಾವಣೆಯನ್ನು ಜನರ ಮೇಲೆ ಹೇರುವುದು ಬೇಡ. ಈ ನಿಟ್ಟಿನಲ್ಲಿ ಯಾರಾದರು ಬೆಂಬಲ ನೀಡಿದರೆ ಮಾತ್ರ ಸರ್ಕಾರ ರಚನೆ ಮಾಡೋಣ ಎಂದು ನಮ್ಮ ನಾಯಕ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ ಎಂದರು. 

ಕರ್ನಾಟಕ ರಾಜಕೀಯ ಪ್ರಹಸನ

ಇನ್ನು ರಾಜ್ಯ ರಾಜಕೀಯದ ಮುಂದಿನ ಬೆಳವಣಿಗೆ ಬಗ್ಗೆ ಕಾದು ನೋಡೋಣ ಎಂದ ಅವರು ಜೆಡಿಎಸ್, ಕಾಂಗ್ರೆಸ್ ಶಾಸಕರ ರಾಜೀನಾಮೆಗೂ  ಕಾದು ನೋಡೋಣ ಏನಾಗುತ್ತೆ ಎಂದ ಮಾಲೀಕಯ್ಯ ಗುತ್ತೇದಾರ್

ಜೆಡಿಎಸ್ ಕಾಂಗ್ರೆಸ್ ಶಾಸಕರ ರಾಜೀನಾಮೆಗೂ, ಬಿಜೆಪಿಗೂ ಸಂಬಂಧವಿಲ್ಲ. ಸರ್ಕಾರ ಬಹುಮತ ಕಳೆದುಕೊಂಡಿದ್ದು ಸಿಎಂ ಸ್ಥಾನಕ್ಕೆ ಹೆಚ್‌ಡಿಕೆ ರಾಜೀನಾಮೆ ನೀಡಲಿ ಎಂದು ಬಿಜೆಪಿ ಮುಖಂಡ ಮಾಜಿ ಸಚಿವ ಮಾಲಿಕಯ್ಯ ಗುತ್ತೇದಾರ್ ಹೇಳಿದರು.