Asianet Suvarna News Asianet Suvarna News

ಕರ್ನಾಟಕದ ನಕಾಶೆ ಹೋಲುವ ಹುಣಸೆ ಮರ

ಕರ್ನಾಟಕ ರಾಜ್ಯದ ನಕಾಶೆ ಹೋಲುವ ಹುಣಸೆ ಮರವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಈ ಫೋಟೋ ಕಲಘಟಗಿ ತಾಲೂಕಿನದ್ದು ಎಂದು ತಿಳಿದು ಬಂದಿದೆ.

Karnataka Map in Tamarind tree

ಧಾರವಾಡ(ನ.27): ಕರ್ನಾಟಕ ರಾಜ್ಯದ ನಕಾಶೆ ಹೋಲುವ ಹುಣಸೆ ಮರವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಈ ಫೋಟೋ ಕಲಘಟಗಿ ತಾಲೂಕಿನದ್ದು ಎಂದು ತಿಳಿದು ಬಂದಿದೆ. ಈ ಮರ ಎಲ್ಲಿದೆ ಎಂಬುದು ಇಷ್ಟು ದಿನಗಳ ಕಾಲ ಯಾರಿಗೂ ಗೊತ್ತಿರಲಿಲ್ಲ.

ಕೆಲವರು ಈ ಮರ ತಮ್ಮೂರಿನ ಬಳಿ ಇದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಹೇಳಿಕೊಳ್ಳುತ್ತಿದ್ದರು. ಆದರೆ ಈಗ ಕರ್ನಾಟಕ ಮ್ಯಾಪ್ ಹೋಲುವ ವಿಶಿಷ್ಟ ಮರ ಕಲಘಟಗಿ ತಾಲೂಕಿನ ಹಿರೇಹೊನ್ನಳ್ಳಿ ಗ್ರಾಮದಲ್ಲಿದೆ ಎನ್ನುವುದು ಸಾಬೀತಾಗಿದೆ. ಹೀಗಾಗಿ ಮರ ಎಲ್ಲಿದೆ ಎಂಬ ಅನುಮಾನಗಳಿಗೆ ತೆರೆ ಬಿದ್ದಿದೆ. ಹುಣಸೆ ಮರದಲ್ಲಿ ಕರ್ನಾಟಕ ನಕಾಶೆ ಮೂಡಿದ್ದು ನಮ್ಮ ಗ್ರಾಮಕ್ಕೊಂದು ಹೆಮ್ಮೆ ಎನ್ನುತ್ತಾರೆ ಹಿರೇಹೊನ್ನಹಳ್ಳಿ ಗ್ರಾಮಸ್ಥರು.

Follow Us:
Download App:
  • android
  • ios