Asianet Suvarna News Asianet Suvarna News

ಲೋಕಲ್ ತೀರ್ಪು: ದೋಸ್ತಿ ಗೆಲ್ಲುತ್ತಾ.. ಕಮಲ ಅರಳುತ್ತಾ..?

ಲೋಕಸಭಾ ಚುನಾವಣಾ ಫಲಿತಾಂಶದ ಅಬ್ಬರ ಮುಗಿದ ಬೆನ್ನಲ್ಲೇ ಇಂದು ಹೊರಬೀಳಲಿರುವ ಸ್ಥಳೀಯ ಸಂಸ್ಥೆಗಳ ಫಲಿತಾಂಶ ತೀವ್ರ ಕುತೂಹಲ ಕೆರಳಿಸಿದೆ. 7 ನಗರಸಭೆ, 30 ಪುರಸಭೆ ಹಾಗೂ 19 ಪಟ್ಟಣ ಪಂಚಾಯಿತಿಗಳಿಗೆ ನಡೆದ ಚುನಾವಣಾ ಫಲಿತಾಂಶದತ್ತ ರಾಜ್ಯದ ಜನರ ಚಿತ್ತ ನೆಟ್ಟಿದೆ. ಯಾವ್ಯಾವ ಜಿಲ್ಲೆಗಳಲ್ಲಿ ಯಾವ ಪಕ್ಷ ಗೆಲುವು ಸಾಧಿಸುತ್ತೆ..? ಎನ್ನುವುದೇ ಕುತೂಹಲಕಾರಿ ವಿಚಾರ

Karnataka Local Body Election Results Announce Today
Author
Bangalore, First Published May 31, 2019, 7:50 AM IST

ಬೆಂಗಳೂರು[ಮೇ.31]: ರಾಜ್ಯದ ಹಲವು ಸ್ಥಳೀಯ ಸಂಸ್ಥೆಗಳಿಗೆ ಮೊನ್ನೆ ನಡೆದಿದ್ದ ಚುನಾವಣೆಯ ಫಲಿತಾಂಶ ಇಂದು ಹೊರಬೀಳಲಿದೆ. ರಾಜ್ಯದ 7 ನಗರಸಭೆ, 30 ಪುರಸಭೆ, 19 ಪಟ್ಟಣ ಪಂಚಾಯಿತಿ ಸೇರಿದಂತೆ 1,361 ವಾರ್ಡ್‌ಗಳಲ್ಲಿ ನಡೆದ ಚುನಾವಣಾ ಫಲಿತಾಂಶ ಇಂದು ಹೊರಬೀಳಲಿದೆ. ಬೆಳಗ್ಗೆ 8 ಗಂಟೆಗೆ ಮತಎಣಿಕೆ ಕಾರ್ಯ ಆರಂಭವಾಗಲಿದೆ. 

ಯಾವೆಲ್ಲ ನಗರಸಭೆಗಳ ಫಲಿತಾಂಶ?

7 ನಗರಸಭೆ: ಹಿರಿಯೂರು, ಹರಿಹರ, ಶಹಾಪುರ, ಶಿಡ್ಲಘಟ್ಟ, ತಿಪಟೂರು, ನಂಜನಗೂಡು, ಬಸವಕಲ್ಯಾಣ ನಗರಸಭೆಗಳ ಫಲಿತಾಂಶ ಇಂದು ಹೊರ ಬೀಳಲಿದೆ 

30 ಪುರಸಭೆ: ಆನೇಕಲ್‌, ದೇವನಹಳ್ಳಿ, ಬಂಗಾರಪೇಟೆ, ಶ್ರೀನಿವಾಸಪುರ, ಮಾಲೂರು, ಬಾಗೇಪಲ್ಲಿ, ಪಾವಗಡ, ಕುಣಿಗಲ್‌, ಕೆ.ಆರ್‌. ನಗರ, 
ಬನ್ನೂರು, ಕಡೂರು, ಮೂಡಬಿದಿರೆ, ಮಳವಳ್ಳಿ, ಕೆ.ಆರ್‌. ಪೇಟೆ, ಶ್ರೀರಂಗಪಟ್ಟಣ, ಗುಂಡ್ಲುಪೇಟೆ, ಬಾಗೇವಾಡಿ, ಇಂಡಿ, ತಾಳಿಕೋಟೆ, ನವಲಗುಂದ, ಮುಂಡರಗಿ, ನರಗುಂದ, ಬ್ಯಾಡಗಿ, ಶಿಗ್ಗಾಂವಿ, ಭಟ್ಕಳ, ಭಾಲ್ಕಿ, ಹುಮ್ನಾಬಾದ್‌, ಚಿಟಗುಪ್ಪ, ಸಂಡೂರು, ಹರಪನಹಳ್ಳಿ, ಹೂವಿನಹಡಗಲಿ

19 ಪಟ್ಟಣ ಪಂಚಾಯಿತಿ 

ಮೊಳಕಾಲ್ಮೂರು, ಹೊಳಲ್ಕೆರೆ, ಶಿರಾಳಕೊಪ್ಪ, ಸೊರಬ, ಹೊಸನಗರ, ತುರುವೇಕೆರೆ, ಕೊಪ್ಪ, ಶೃಂಗೇರಿ, ಮೂಡಿಗೆರೆ, ನರಸಿಂಹರಾಜಪುರ, ಮೂಲ್ಕಿ, ಸುಳ್ಯ, ಆಲೂರು, ಅರಕಲಗೂಡು, ಯಳಂದೂರು, ಹನೂರು, ಕಲಘಟಗಿ, ಅಳ್ನಾವರ, ಔರಾದ್‌, ಹೊನ್ನಾವರ, ಸಿದ್ದಾಪುರ, ಕಮಲಾಪುರ

ಲೋಕಸಮರದ ಅಬ್ಬರ ಬಳಿಕ ಸ್ಥಳೀಯ ಸಂಸ್ಥೆಗಳ ಫಲಿತಾಂಶ ತೀವ್ರ ಕುತೂಹಲ ಕೆರಳಿಸಿದ್ದು ಯಾವ್ಯಾವ ಜಿಲ್ಲೆಗಳಲ್ಲಿ ಯಾವ ಪಕ್ಷ ಗೆಲುವು ಸಾಧಿಸುತ್ತೆ..? ಅನ್ನೋದು ಗೊತ್ತಾಗಲು ಕೆಲವು ಕ್ಷಣಗಳು ಮಾತ್ರ ಬಾಕಿ.

Follow Us:
Download App:
  • android
  • ios