ಹೊಳೆನರಸೀಪುರ ಚನ್ನಾಂಬಿಕಾ ಕಲ್ಯಾಣ ಮಂಟಪದಲ್ಲಿ ಇಂದು ಪೂಜಾ- ಕಾರ್ತಿಕ್ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದರು. ವಿವಾಹವಾದ ಬಳಿಕ ನೇರವಾಗಿ ಮತಗಟ್ಟೆಗೆ ತೆರಳಿದ ಪೂಜಾ ನಗರ ಸ್ಥಳೀಯಾಡಳಿತ ಚುನಾವಣೆಯಲ್ಲಿ ತಮ್ಮ ಹಕ್ಕು ಚಲಾಯಿಸಿದ್ದಾರೆ.

ಹಾಸನ[ಆ.31]: ರಾಜ್ಯದ ಒಟ್ಟು 105 ನಗರ ಸ್ಥಳೀಯಾಡಳಿತ ಸಂಸ್ಥೆಗಳಿಗೆ ಚುನಾವಣೆ ನಡೆಯುತ್ತಿದ್ದು, ಹಾಸನ ಜಿಲ್ಲೆಯ ಹೊಳೆನರಸೀಪುರದಲ್ಲಿ ನೂತನ ವಧು ಕಲ್ಯಾಣ ಮಂಟಪದಿಂದ ಮತಗಟ್ಟೆಗೆ ಬಂದು ಮತ ಚಲಾಯಿಸಿದರು.

ಹೊಳೆನರಸೀಪುರ ಚನ್ನಾಂಬಿಕಾ ಕಲ್ಯಾಣ ಮಂಟಪದಲ್ಲಿ ಇಂದು ಪೂಜಾ- ಕಾರ್ತಿಕ್ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದರು. ವಿವಾಹವಾದ ಬಳಿಕ ನೇರವಾಗಿ ಮತಗಟ್ಟೆಗೆ ತೆರಳಿದ ಪೂಜಾ ನಗರ ಸ್ಥಳೀಯಾಡಳಿತ ಚುನಾವಣೆಯಲ್ಲಿ ತಮ್ಮ ಹಕ್ಕು ಚಲಾಯಿಸಿದ್ದಾರೆ. ಪೂಜಾಗೆ ಪತಿ ಕಾರ್ತಿಕ್ ಕೂಡಾ ಸಾಥ್ ನೀಡಿದರು.

ಮೈಸೂರು, ಶಿವಮೊಗ್ಗ ಮತ್ತು ತುಮಕೂರು ಜಿಲ್ಲೆಯ ಮೂರು ಮಹಾನಗರ ಪಾಲಿಕೆ ಸೇರಿದಂತೆ 21 ಜಿಲ್ಲೆಗಳ 29 ನಗರ ಸಭೆಗಳು, 53 ಪುರಸಭೆಗಳು ಮತ್ತು 20 ಪಟ್ಟಣ ಪಂಚಾಯಿತಿಗಳಿಗೆ ಚುನಾವಣೆ ನಡೆದಿದ್ದು ಬಹುತೇಕ ಶಾಂತಿಯುತವಾಗಿ ಮುಕ್ತಾಯವಾಗಿದೆ.