ಈಶ್ವರಪ್ಪ ರಾಜೀನಾಮೆ ಕೊಟ್ಟ ಹುದ್ದೆಗೆ ಬಿಜೆಪಿಯಲ್ಲಿ ರೇಸ್

First Published 20, Jun 2018, 6:10 PM IST
Karnataka legislative council opposition leader race in BJP
Highlights

ಇಲ್ಲಿ ವಿರೋಧ ಪಕ್ಷದ ನಾಯಕನ ಸ್ಥಾನಕ್ಕೂ ಪೈಪೋಟಿ ಆರಂಭವಾಗಿದೆ. ರಾಜೀನಾಮೆಯಿಂದ ತೆರವಾಗಿರುವ ಕ್ಷೇತ್ರಕ್ಕೆ ಪಕ್ಷದ ನಾಯಕರಲ್ಲೇ ಹೋರಾಟ ಶುರುವಾಗಿದೆ.

ಬೆಂಗಳೂರು ಜೂನ್ 20:  ಇಲ್ಲಿ ವಿರೋಧ ಪಕ್ಷದ ನಾಯಕನ ಸ್ಥಾನಕ್ಕೂ ಪೈಪೋಟಿ ಆರಂಭವಾಗಿದೆ. ರಾಜೀನಾಮೆಯಿಂದ ತೆರವಾಗಿರುವ ಕ್ಷೇತ್ರಕ್ಕೆ ಪಕ್ಷದ ನಾಯಕರಲ್ಲೇ ಹೋರಾಟ ಶುರುವಾಗಿದೆ.

ರಾಜ್ಯದ ವಿಧಾನಪರಿಷತ್ನಲ್ಲಿ ಮತ್ತೆ ವಿರೋಧ ಪಕ್ಷದಲ್ಲೇ ಮುಂದುವರಿಯಲಿರುವ ಬಿಜೆಪಿಯಲ್ಲಿ ಪಕ್ಷದ ನಾಯಕನ ಆಯ್ಕೆಗೆ ರೇಸ್ ಶುರುವಾಗಿದೆ. ಶಾಸಕರಾಗಿ ಕೆ.ಎಸ್.ಈಶ್ವರಪ್ಪ ಆಯ್ಕೆಯಾಗಿದ್ದರಿಂದ ಅವರು ರಾಜೀನಾಮೆ ನೀಡಿದ್ದು ನಾಯಕನ ಆಯ್ಕೆಗೆ ಬಿಜೆಪಿಯಲ್ಲಿ ಪೈಪೋಟಿ ಹೆಚ್ಚಿದೆ. 

ಕೋರ್ ಕಮಿಟಿ ಸಭೆಯಲ್ಲೇ ಅಂತಿಮ ತಿರ್ಮಾನ ಮಾಡಲು ಬಿಜೆಪಿ ಮುಂದಾಗಿದೆ. ಕೋಟಾ ಶ್ರೀನಿವಾಸ್ ಪೂಜಾರಿ, ಕೆ.ಬಿ.ಶಾಣಪ್ಪ, ಆಯನೂರು ಮಂಜುನಾಥ್ ರೇಸ್​ ನಲ್ಲಿದ್ದಾರೆ. ಜತೆಗೆ  ಪ್ರತಿಪಕ್ಷ ನಾಯಕನಾಗಲು ರಘುನಾಥ್ ರಾವ್ ಮಲ್ಕಾಪುರೆ ಅವರೂ ಲಾಬಿ ನಡೆಸಿದ್ದಾರೆ. 

ಕೋಟಾ ಶ್ರೀನಿವಾಸ್ ಪೂಜಾರಿ, ರಘುನಾಥ್ ರಾವ್ ಮಲ್ಕಾಪುರೆ ಮಧ್ಯೆ ಪೈಪೋಟಿಯಿದ್ದು ಬಿಜೆಪಿ ನಾಯಕರು ಕೋರ್ ಕಮಿಟಿ ಸಭೆ ನಡೆಸಿಯೇ ತೀರ್ಮಾನ ತೆಗೆದುಕೊಳ್ಳಲು ಮುಂದಾಗಿದ್ದಾರೆ.  

loader