ನವದೆಹಲಿ(ಸೆ.12): ಸುಪ್ರೀಂಕೋರ್ಟ್​ನಲ್ಲಿ ಇಂದು ನಡೆದ ಕರ್ನಾಟಕ ಸಲ್ಲಿದ್ದ ಮೇಲ್ಮನವಿ ವಿಚಾರಣೆಯಲ್ಲಿ ರಾಜ್ಯಕ್ಕೆ ಮತ್ತೆ ಹಿನ್ನಡೆಯಾಗಿದ್ದು, ಅರ್ಜಿ ವಿಚಾರಣೆ ವೇಳೆ ಕರ್ನಾಟಕ ಪರ ವಕೀಲರು ಮೌನವಾಗಿ ನಿಂತಿದ್ದರು ಎನ್ನವ ಮಾತು ಕೇಳಿ ಬಂದಿದೆ. 

ವಿಚಾರಣೆ ವೇಳೆ ಸುಪ್ರೀಂ ಕೋರ್ಟ್ ಇಂದಿನಿಂದ ತಮಿಳುನಾಡಿಗೆ ಸೆ.20ರವರೆಗೆ ದಿನಕ್ಕೆ 12 ಸಾವಿರ ಕ್ಯೂಸೆಕ್ ಬಿಡಬೇಕು ಎಂದು ಆದೇಶ ನೀಡಿದೆ. ಈ ಸಂದರ್ಭದಲ್ಲಿ ನಮ್ಮ ಬಳಿ ನೀರಿಲ್ಲ, ನೀರು ಬಿಡುವ ದಿನಾಂಕವನ್ನು ಸೆ.20ರವರೆಗೆ ಹೆಚ್ಚಿಸಬೇಡಿ ಎಂದು ನಮ್ಮ ವಕೀಲರು ವಾದಿಸಲೇ ಇಲ್ಲ ಎನ್ನಲಾಗಿದೆ. 

ಸುಪ್ರೀಂಕೋರ್ಟ್ ಆದೇಶ ಕೊಡುವಾಗ ಏನನ್ನೂ ಹೇಳದ ನಾರಿಮನ್ ತಂಡ, ನೀರು ಬಿಡುವ ದಿನಾಂಕವನ್ನು ಸೆ. 15ರಿಂದ ಸೆ.20ಕ್ಕೇ ಹೆಚ್ಚಿಸಿದನ್ನು ಮೌನವಾಗಿಯೇ ಒಪ್ಪಿದ್ದಾರೆ ಎನ್ನಲಾಗಿದೆ.

ನೀರು ಬಿಡುವಂತೆ ತಿಳಿಸಿದಾಗ ನಮ್ಮ ರಾಜ್ಯದ ವಕೀಲರಿಂದ ಯಾವ ವಿರೋಧವೋ ವ್ಯಕ್ತವಾಗಿಲ್ಲ ಇದರಿಂದಾಗಿ ಹೆಚ್ಚುವರಿ 3 ಟಿಎಂಸಿ ಅಧಿಕ ನೀರು ಬಿಡುವ ಅನಿವಾರ್ಯತೆ ನಿರ್ಮಾಣವಾಗಿದ್ದು, ಮೊದಲು 13 ಟಿಎಂಸಿ ನೀರು ಬಿಡಬೇಕಿತ್ತು, ಈಗ 16 ಟಿಎಂಸಿ ಬಿಡಬೇಕಾಗಿದೆ.