ಬೆಂಗಳೂರು[ಜೂ. 23]  ಉತ್ತರ ಕನ್ನಡಸ ಸಂಸದರ ನಡವಳಿಕೆಗೆ ಖಾರವಾದ ಪ್ರತಿಕ್ರಿಯೆಗಳು ಬರುತ್ತಿವೆ.  ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಕುರಿತು ಸೋಶಿಯಲ್ ಮೀಡಿಯಾದಲ್ಲಿ ಅಭಿಯಾನ ನಡೆದಿತ್ತು. ಕಾರವಾರ ಪ್ರವಾಸಿ ಮಂದಿರದಲ್ಲಿ ಸಂಸದರ ಭೇಟಿ ಮಾಡಿದ್ದ ಯುವಕರ ನಿಯೋಗ ಆಸ್ಪತ್ರೆ ನಿರ್ಮಾಣದ ಬಗ್ಗೆ ಮನವಿ ಸಲ್ಲಿಸಿತ್ತು.

ಅನಂತ್ ಕುಮಾರ್ ಹೆಗಡೆ ಅವರನ್ನು ತರಾಟೆಗೆ ತೆಗೆದುಕೊಂಡಿರುವ ಜೆಡಿಎಸ್ ಟ್ವೀಟ್ ಮಾಡಿ ಆಕ್ರೋಶ ಹೊರಹಾಕಿದೆ.  ಅನಂತ್ ಕುಮಾರ್ ಹೆಗಡೆಯವರೇ ನಿಮ್ಮದೇನಿದ್ರೂ ಆಸ್ಪತ್ರೆಯಲ್ಲಿ ವೈದ್ಯರಿಗೆ ಹೊಡೆಯೋ ಕೆಲಸ ಅಷ್ಟೇ. ಯಾವತ್ತೂ ಜನರಿಗೆ ಅನುಕೂಲ ಮಾಡಿಲ್ಲ. ಇದು ದುರಹಂಕಾರದ ಪರಮಾವಧಿ! ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಈಗಾಗಲೇ ಕಾರವಾರದಲ್ಲಿ ಸುಸಜ್ಜಿತ ಆಸ್ಪತ್ರೆಗೆ ಈ ವರ್ಷದ ಬಜೆಟ್‌ನಲ್ಲಿ 150 ಕೋಟಿ ಮೀಸಲಿರಿಸಿದ್ದಾರೆ. ಇದುವೇ ಜನಪರ ಕೆಲಸ, ನೋಡಿ ಕಲಿಯಿರಿ! ಎಂದು ಕಾಲೆಳೆದಿದೆ.

ಉತ್ತರ ಕನ್ನಡಕ್ಕೆ ಸುಸಜ್ಜಿತ ಆಸ್ಪತ್ರೆ ಬೇಕು ಎಂಬ ಅಭಿಯಾನಕ್ಕೆ ಅನಂತ್ ಕುಮಾರ್ ಹೆಗಡೆ ಯಾವುದೇ  ಪ್ರತಿಕ್ರಿಯೆ ನೀಡಿರಲಿಲ್ಲ. ಕಳೆದ ಲೋಕಸಭಾ ಚುನಾವಣಾ ಫಲಿತಾಂಶದಲ್ಲಿ ಅನಂತ್ ಕುಮಾರ್ ಕೆನರಾ ಲೋಕಸಭಾ ಕ್ಷೇತ್ರದಿಂದ 4.7 ಲಕ್ಷ ಮತಗಳ ಭಾರೀ ಅಂತರದಲ್ಲಿ ಗೆಲುವು ಸಾಧಿಸಿ ಸಂಸದರಾಗಿದ್ದರು.