ಸಿಎಂ ಸಿದ್ದರಾಮಯ್ಯ ಹಾಸನ ಭಾಗಕ್ಕೆ ‌ನೀರು ಬಿಟ್ಟು ಕೆಆರ್'ಎಸ್ ಭಾಗದ ರೈತರಿಗೆ ನೀರು ಬಿಡದೆ ಮಲತಾಯಿ ಧೋರಣೆ ಮಾಡುತ್ತಿದ್ದಾರೆಂದು ಸರ್ಕಾರದ ನಡೆಯನ್ನು ಖಂಡಿಸಿದ್ದಾರೆ. ಈ ಕೂಡಲೇ ರಾಜ್ಯ ಸರ್ಕಾರ ನೀರು ಬಿಡದಿದ್ದರೆ ತಾನು ಜೀವಂತ ಸಮಾಧಿಯಾಗುವುದಾಗಿ ಎಚ್ಚರಿಸಿ ತನ್ನ ಸಾವಿಗೆ ರಾಜ್ಯ ಸರ್ಕಾರ ಮತ್ತು ಮುಖ್ಯಮಂತ್ರಿ ಮತ್ತು ನೀರಾವರಿ ಮಂತ್ರಿ ಕಾರಣವಾಗಲಿದ್ದಾರೆ ಎಂದು ಎಚ್ಚರಿಕೆ ನೀಡಿದ್ದಾರೆ.

ಮಂಡ್ಯ(ಆ. 09): ಮಂಡ್ಯ ಜಿಲ್ಲೆಯ ನಾಲೆಗಳಿಗೆ ನೀರು ಬಿಡುವಂತೆ ಆಗ್ರಹಿಸಿ ಮದ್ದೂರಿನ ಕೆರೆಯಂಗಳದಲ್ಲಿ ಕಳೆದ 37 ದಿನಗಳಿಂದ ಕರ್ನಾಟಕ ಜನಪರ ವೇದಿಕೆ ನಡೆಸುತ್ತಿದ್ದ ಧರಣಿ ಹೋರಾಟ ಇಂದಿನಿಂದ ತೀವ್ರಗೊಂಡಿದೆ. ಕಜವೇ ರಾಜ್ಯಾಧ್ಯಕ್ಷ ರಮೇಶ್ ಗೌಡ ಕೆರೆಯಂಗಳದಲ್ಲಿ‌ ಕತ್ತಿನವರೆಗೂ ಗುಂಡಿಯಲ್ಲಿ ಹೂತು ಹಾಕಿಸಿಕೊಂಡು ವಿನೂತನವಾಗಿ ಪ್ರತಿಭಟನೆಗೆ ಇಳಿದಿದ್ದಾರೆ. ರಾಜ್ಯ ಸರ್ಕಾರ ತಮಿಳುನಾಡಿಗೆ ನೀರು ಹರಿಸುವ ಮೂಲಕ ಮಂಡ್ಯ ಜಿಲ್ಲೆಗೆ ದ್ರೋಹ ಬಗೆಯುತ್ತಿರೋದಾಗಿ ರಮೇಶ್ ಗೌಡ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೇ, ಸಿಎಂ ಸಿದ್ದರಾಮಯ್ಯ ಹಾಸನ ಭಾಗಕ್ಕೆ ‌ನೀರು ಬಿಟ್ಟು ಕೆಆರ್'ಎಸ್ ಭಾಗದ ರೈತರಿಗೆ ನೀರು ಬಿಡದೆ ಮಲತಾಯಿ ಧೋರಣೆ ಮಾಡುತ್ತಿದ್ದಾರೆಂದು ಸರ್ಕಾರದ ನಡೆಯನ್ನು ಖಂಡಿಸಿದ್ದಾರೆ. ಈ ಕೂಡಲೇ ರಾಜ್ಯ ಸರ್ಕಾರ ನೀರು ಬಿಡದಿದ್ದರೆ ತಾನು ಜೀವಂತ ಸಮಾಧಿಯಾಗುವುದಾಗಿ ಎಚ್ಚರಿಸಿ ತನ್ನ ಸಾವಿಗೆ ರಾಜ್ಯ ಸರ್ಕಾರ ಮತ್ತು ಮುಖ್ಯಮಂತ್ರಿ ಮತ್ತು ನೀರಾವರಿ ಮಂತ್ರಿ ಕಾರಣವಾಗಲಿದ್ದಾರೆ ಎಂದು ಎಚ್ಚರಿಕೆ ನೀಡಿದ್ದಾರೆ.