ಕೋಮು ಸೌಹಾರ್ದ ವೇದಿಕೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಮೇವಾನಿ, ಕೋಮುವಾದಿಗಳು ಕರ್ನಾಟಕವನ್ನು ಗುಜರಾತ್ ಮಾಡಲು ಹೊರಟಿದ್ದಾರೆ. ನಾವು ಇದನ್ನು ಗುಜರಾತ್ ಮಾಡಲು ಬಿಡುವುದಿಲ್ಲ. ಬಾಬಾ ಬುಡನ್'ಗಿರಿಯಲ್ಲಿ ಹಿಂದು-ಮುಸ್ಲಿಂ ಒಟ್ಟಾಗಿ ತಪಸ್ಸು ಮಾಡಲು ಪ್ರಯತ್ನಿಸುತ್ತಿದ್ದೇವೆ. ಈ ಸಂದೇಶವನ್ನು ಗುಜರಾತಿಗೆ ತೆಗೆದುಕೊಂಡು ಹೋಗುತ್ತೇವೆ ಎಂದು ಮೇವಾನಿ ಹೇಳಿದ್ದಾರೆ.
ಚಿಕ್ಕಮಗಳೂರು(ಡಿ.29): ಕರ್ನಾಟಕ ಕೋಮುಸೌಹಾರ್ದತೆಯಿಂದ ಕೂಡಿದ್ದ ನಾಡಾಗಿದ್ದು, ಇದು ಉಮಾಭಾರತಿಯ ನಾಡಲ್ಲ, ಬದಲಾಗಿ ಇದು ಗೌರಿ ಲಂಕೇಶ್ ಕರ್ನಾಟಕ ಎಂದು ದಲಿತ ಚಳುವಳಿ ಹೋರಾಟಗಾರ ಹಾಗೂ ನೂತನವಾಗಿ ಗುಜರಾತ್ ಶಾಸಕರಾಗಿ ಆಯ್ಕೆಯಾಗಿರುವ ಜಿಗ್ನೇಶ್ ಮೇವಾನಿ ಹೇಳಿದ್ದಾರೆ.
ಕೋಮು ಸೌಹಾರ್ದ ವೇದಿಕೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಮೇವಾನಿ, ಕೋಮುವಾದಿಗಳು ಕರ್ನಾಟಕವನ್ನು ಗುಜರಾತ್ ಮಾಡಲು ಹೊರಟಿದ್ದಾರೆ. ನಾವು ಇದನ್ನು ಗುಜರಾತ್ ಮಾಡಲು ಬಿಡುವುದಿಲ್ಲ. ಬಾಬಾ ಬುಡನ್'ಗಿರಿಯಲ್ಲಿ ಹಿಂದು-ಮುಸ್ಲಿಂ ಒಟ್ಟಾಗಿ ತಪಸ್ಸು ಮಾಡಲು ಪ್ರಯತ್ನಿಸುತ್ತಿದ್ದೇವೆ. ಈ ಸಂದೇಶವನ್ನು ಗುಜರಾತಿಗೆ ತೆಗೆದುಕೊಂಡು ಹೋಗುತ್ತೇವೆ ಎಂದು ಮೇವಾನಿ ಹೇಳಿದ್ದಾರೆ.
ಮೋದಿ ಮುದುಕರಾಗಿದ್ದಾರೆ. ಬರೀ ಸುಳ್ಳು ಭರವಸೆ ನೀಡುತ್ತಾರೆ. ನಾವು ಅವರ ಮಾತನ್ನು ಕೇಳೋದು ಬೇಡ. ಬದಲಾಗಿ ನಾವು ಕನ್ಹಯ್ಯಾ ಕುಮಾರ್ ಸೇರಿದಂತೆ ಹಲವಾರು ಹೋರಾಟಗಾರರ ಮಾತು ಕೇಳೋಣ ಎಂದು ಕರೆ ನೀಡಿದ ಅವರು, ಕೋಮುವಾದಿಗಳು ತಮ್ಮ ವಾಂತಿಯಿಂದ ಕರ್ನಾಟಕವನ್ನು ಗಲೀಜು ಮಾಡುತ್ತಿದ್ದಾರೆ, ನಾವು ಅವರಿಗೆ ಸರಿಯಾದ ಉತ್ತರ ಕೊಡಬೇಕಿದೆ ಎಂದು ಕರೆ ನೀಡಿದರು.