ತಂತ್ರಜ್ಞಾನ ಕ್ಷೇತ್ರದಲ್ಲಿ ಮಾತ್ರವಲ್ಲ, ಕೃಷಿ ಆಧಾರಿತ ಕೈಗಾರಿಕಾ ರಂಗದ ಪ್ರಗತಿಯಲ್ಲೂ ಕರ್ನಾಟಕ ಗಣನೀಯ ಸಾಧನೆ ಮಾಡಿದೆ ಎಂದು ಕೇಂದ್ರ ಆಹಾರ ಸಂಸ್ಕರಣಾ ಸಚಿವೆ ಹರ್‌ಸಿಮ್ರತ್ ಕೌರ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಬೆಂಗಳೂರು(ಆ.19): ತಂತ್ರಜ್ಞಾನ ಕ್ಷೇತ್ರದಲ್ಲಿ ಮಾತ್ರವಲ್ಲ, ಕೃಷಿ ಆಧಾರಿತ ಕೈಗಾರಿಕಾ ರಂಗದ ಪ್ರಗತಿಯಲ್ಲೂ ಕರ್ನಾಟಕ ಗಣನೀಯ ಸಾಧನೆ ಮಾಡಿದೆ ಎಂದು ಕೇಂದ್ರ ಆಹಾರ ಸಂಸ್ಕರಣಾ ಸಚಿವೆ ಹರ್‌ಸಿಮ್ರತ್ ಕೌರ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಕೇಂದ್ರ ಆಹಾರ ಸಂಸ್ಕರಣಾ ಕೈಗಾರಿಕೆಗಳ ಸಚಿವಾಲಯವು ಭಾರತೀಯ ಕೈಗಾರಿಕಾ ಒಕ್ಕೂಟದ ಸಹಯೋಗದಲ್ಲಿ ಇದೇ ನವೆಂಬರ್‌'ನಲ್ಲಿ ದೆಹಲಿಯಲ್ಲಿ ಹಮ್ಮಿಕೊಂಡಿರುವ ‘ವರ್ಲ್ಡ್ ಫುಡ್ ಇಂಡಿಯಾ- 2017’ ಮೇಳಕ್ಕೆ ಪ್ರಚಾರರ್ಥವಾಗಿ ಶುಕ್ರವಾರ ನಡೆದ ರೋಡ್ ಶೋದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ನಾವು ಈವರೆಗೆ ಕೃಷಿ ರಂಗದ ಸಾ‘ಕ ರಾಜ್ಯ ಯಾವುದೆಂದರೆ ಮೊದಲು ಪಂಜಾಬ್ ಎನ್ನುತ್ತಿದ್ದೆವು.

ಆದರೆ, ಈಗ ಆ ಆಲೋಚನೆ ಬದಲಾಗಿದ್ದು, ಕೃಷಿ ಕ್ಷೇತ್ರದ ಅಭಿವೃದ್ಧಿಯಲ್ಲಿ ಪಂಜಾಬ್‌ ಅನ್ನು ಮೀರಿಸುವಂತೆ ಕರ್ನಾಟಕವು ಮುನ್ನುಗ್ಗಿ ಸಾಗುತ್ತಿದೆ ಎಂದು ಪ್ರಶಂಸಿಸಿದರು.