ಸೇನೆಯಲ್ಲಿ ಇನ್ನು ಕರ್ನಾಟಕದ ಮುಧೋಳ ನಾಯಿ ಬಳಕೆಇದೇ ಮೊದಲ ಬಾರಿ ಸೇನೆಗೆ ಭಾರತೀಯ ನಾಯಿ ನಿಯೋಜನೆಕಾಶ್ಮೀರದ ಗಡಿಯಲ್ಲಿ ರಕ್ಷಣಾ ಕಾರ್ಯಕ್ಕೆ ನಿಯೋಜನೆ6 ನಾಯಿಗಳ ತರಬೇತಿ ಪೂರ್ಣ, ವರ್ಷಾಂತ್ಯಕ್ಕೆ ನಿಯೋಜನೆ
ಡೆಹ್ರಾಡೂನ್: ಸೇನೆಯಲ್ಲಿ ಇದೇ ಮೊದಲ ಬಾರಿ ಭಾರತೀಯ ನಾಯಿಯೊಂದು ಸೇರಿ ಕೊಳ್ಳಲಿದೆ. ಅದು ಕರ್ನಾಟಕದ ಮುಧೋಳ ನಾಯಿ ಎಂಬುದೇ ಹೆಮ್ಮೆಯ ವಿಚಾರ.
ಈವರೆಗೆ ಭಾರತೀಯ ಸೇನೆಯು ಜರ್ಮನ್ ಶೆಫರ್ಡ್, ಲ್ಯಾಬ್ರೆಡಾರ್ ನಾಯಿಯನ್ನು ಬಳಸಿಕೊಳ್ಳುತ್ತಿತ್ತು. ಆದರೆ ಇದೇ ಮೊದಲ ಬಾರಿ ದೇಶೀ ತಳಿ ಬಳಸಿಕೊಳ್ಳಲು ನಿರ್ಧರಿಸಿದ್ದು, 6 ಮುಧೋಳ ನಾಯಿಗಳಿಗೆ ಉತ್ತರ ಪ್ರದೇಶದ ಮೇರಠ್‌ನ ಸೇನಾ ಪಶು ಕೇಂದ್ರದಲ್ಲಿ ತರಬೇತಿ ಮುಗಿಸಲಾಗಿದೆ.
ಈ ವರ್ಷಾಂತ್ಯಕ್ಕೆ ಇವು ಗಳನ್ನು ಜಮ್ಮು-ಕಾಶ್ಮೀರದ ಪಾಕ್ ಗಡಿಗುಂಟ ‘ಸವೇಕ್ಷಣೆ’ ಮತ್ತು ‘ಗಡಿ ಕಾಯುವ ಕೆಲಸ’ಕ್ಕೆ ನಿಯೋಜಿಸುವ ನಿರೀಕ್ಷೆಯಿದೆ.
ಕಳೆದ ವರ್ಷವೇ ಕರ್ನಾಟಕದಿಂದ ಈ ನಾಯಿಗಳನ್ನು ಮೇರಠ್‌ನ ಸೇನಾ ಪಶು ಕೇಂದ್ರಕ್ಕೆ ಕಳಿಸಲಾಗಿತ್ತು. ‘ಈ ನಾಯಿಗಳನ್ನು ಹೇಗೆ ಪಳಗಿಸುವುದು ಎಂಬುದು ನಮಗೆ ಮೊದಲು ಯಕ್ಷಪ್ರಶ್ನೆಯಾಗಿತ್ತು. ತರಬೇತುದಾರನು ನಾಯಿಯ ಜತೆ ಹೊಂದಿಕೊಳ್ಳುವುದು ಮುಖ್ಯ. ಆತ ಹೊಂದಿಕೊಂಡ ಬಳಿಕ ಅವುಗಳಿಗೆ ವಿಧೇಯತೆಯ ತರಬೇತಿ ಹಾಗೂ ಇನ್ನುಳಿದ ನಿರ್ದಿಷ್ಟ ಸೇನಾ ತರಬೇತಿ ನೀಡಲಾಯಿತು’ ಎಂದು ಅಧಿಕಾರಿಯೊಬ್ಬರುಹೇಳಿದ್ದಾರೆ.
ಮುಧೋಳ ನಾಯಿಯೇ ಏಕೆ?: ಮುಧೋಳ ನಾಯಿ ಐತಿಹಾಸಿಕ ಪರಂಪರೆ ಹೊಂದಿದೆ. ಇದರ ದೇಹ ಸಪೂರವಾಗಿದ್ದು ವೇಗದಿಂದ ಓಡಬಲ್ಲವು. ಅತ್ಯಂತ ಚಲನಶೀಲ ನಾಯಿ ಎಂದು ಹೆಸರುವಾಸಿಯಾಗಿದೆ. ಮುಧೋಳ ನಾಯಿಯನ್ನು ಗಡಿಯಲ್ಲಿ ‘ರಕ್ಷಣಾ ನಾಯಿ’ ಎಂದು ಬಳಸಿಕೊಳ್ಳಲಾಗುತ್ತದೆ ಎಂದು ಅಧಿಕಾರಿಗಳು ಹೇಳಿದರು
