Asianet Suvarna News Asianet Suvarna News

ಅತ್ತ ರೋಶನ್ , ರಾಮಲಿಂಗಾರೆಡ್ಡಿ ಸ್ಫೋಟ, ಇತ್ತ ಕೈ ಹಿರಿಯ ಸಚಿವರ ನಡುವೆ ಕಿತ್ತಾಟ

ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಎಚ್. ವಿಶ್ವನಾಥ್ ರಾಜೀನಾಮೆ ನೀಡಿ ಹೊರನಡೆದಿದ್ದರೆ ಇತ್ತ ಸಚಿವರಿಬ್ಬರ ನಡುವೆಯೇ ವಾರ್ ಶುರುವಾಗಿದೆ. ಉತ್ತರ ಕರ್ನಾಟಕ ಭಾಗದ ಇಬ್ಬರು ನಾಯಕರ  ನಡುವೆ ಮಾತಿನ ಸಮರ ನಡೆದಿದೆ.

Karnataka Home minister MB Patil Hits Health Minister Shivanand patil
Author
Bengaluru, First Published Jun 4, 2019, 5:00 PM IST

ವಿಜಯಪುರ(ಜೂ. 04) ರಾಜ್ಯ ಕಾಂಗ್ರೆಸ್ ನಲ್ಲಿ ಎಲ್ಲವೂ ಸರಿ ಇಲ್ಲ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಶಾಸಕರಾದ ರೋಶನ್ ಬೇಗ್ ಮತ್ತು ರಾಮಲಿಂಗಾರೆಡ್ಡಿ ಬಹಿರಂಗವಾಗಿಯೇ ಅಸಮಾಧಾನ ಹೊರ ಹಾಕಿದ್ದರೆ ಅತ್ತ ವಿಜಯಪುರದಲ್ಲಿ ಸಚಿವರಿಬ್ಬರ ನಡುವೆಯೇ ವಾರ್ ಶುರುವಾಗಿದೆ.

ಗೃಹ ಸಚಿವ  ಎಂ.ಬಿ ಪಾಟೀಲ್ ಮತ್ತು ಆರೋಗ್ಯ ಸಚಿವ ಶಿವಾನಂದ್ ಪಾಟೀಲ್ ನಡುವೆ ಕೋಲ್ಡ್ ವಾರ್ ಶುರುವಾಗಿದೆ. ಸಚಿವ ಎಂ.ಬಿ ಪಾಟೀಲ್ ಹಾಗೂ ಶಿವಾನಂದ ಪಾಟೀಲ್ ನಡುವೆ ಮಾತಿನ ಸಮರ ಶುರುವಾಗಿದೆ.

ಆರೋಗ್ಯ ಸಚಿವ ಶಿವಾನಂದ ಪಾಟೀಲ ವಿರುದ್ಧ ಗರಂ ಆಗಿರುವ ಎಂಬಿ ಪಾಟೀಲ್, ಆಲಮಟ್ಟಿ ಡ್ಯಾಂ ನೀರು ಎಂಬಿಪಿ ಖಾಲಿ ಮಾಡಿದ್ದಾರೆ ಎಂದು ಹೇಳುತ್ತಾರೆ. ಅವರಿಗೆ ಹೊಟ್ಟೆ ಉರಿ ಜಾಸ್ತಿ ಇದೆ.  ಶಿವಾನಂದ ಪಾಟೀಲ ಕೊಳಕು ಮಾತನಾಡುತ್ತಾರೆ. ನಮ್ಮ ಪಕ್ಷದ ಸಚಿವರಾಗಿ ಏನು ತಿಳಿದುಕೊಳ್ಳದೆ ಮಾತನಾಡುವುದು ಸರಿಯಲ್ಲ ಎಂದು ವಿಜಯಪುರದಲ್ಲಿ ವಾಗ್ದಾಳಿ ಮಾಡಿದ್ದಾರೆ.

‘ಲಕ್ಷಣ ರೇಖೆ ದಾಟಿದವರನ್ನು ಪಕ್ಷ ನೋಡಿಕೊಳ್ಳುತ್ತದೆ’

ಇಷ್ಟೊಂದು ನೀರಾವರಿ ಕಾಮಗಾರಿಗೆ ಶ್ರಮ ವಹಿಸಿರುವ ನನಗೆ ಗೌರವ ನೀಡಬೇಕು. ಅದನ್ನು ಬಿಟ್ಟು ಈ ರೀತಿಯ ಹೇಳಿಕೆ ನೀಡುವುದು ಸರಿ ಅಲ್ಲ. ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಗಮನಕ್ಕೆ ಎಲ್ಲ ವಿಚಾರಗಳನ್ನು ತಂದಿದ್ದೇನೆ ಎಂದು ಎಂ.ಬಿ ಪಾಟೀಲ್ ತಿಳಿಸಿದ್ದಾರೆ.

Follow Us:
Download App:
  • android
  • ios