ಹೊಸ ವರ್ಷ ಆಚರಣೆ ಪ್ರಯುಕ್ತ ಟೈಮ್ಸ್ ಕ್ರಿಯೇಷನ್, ಡಿ.31ರಂದು ರಾತ್ರಿ ನಗರದ ಹೆಬ್ಬಾಳ-ಕೆ.ಆರ್.ಪುರ ವರ್ತುಲ ರಸ್ತೆಯಲ್ಲಿರುವ ಮಾನ್ಯತಾ ಟೆಕ್ ಪಾರ್ಕ್‌'ಗೆ ಹೊಂದಿಕೊಂಡ ವೈಟ್ ಆರ್ಕಿಡ್ ಕನ್ವೆನ್‌'ಷನ್ ಸೆಂಟರ್ ಒಳಾಂಗಣದಲ್ಲಿ ‘ಸನ್ನಿ ನೈಟ್ ಇನ್ ಬೆಂಗಳೂರು’ ಕಾರ್ಯಕ್ರಮ ಆಯೋಜಿಸಿದೆ.
ಬೆಂಗಳೂರು(ಡಿ.21): ಹೊಸ ವರ್ಷಾಚರಣೆ ಪ್ರಯುಕ್ತ ಡಿ. 31ರಂದು ರಾತ್ರಿ ನಗರದಲ್ಲಿ ಆಯೋಜಿಸಲು ಉದ್ದೇಶಿಸಿರುವ ‘ಸನ್ನಿ ನೈಟ್ ಇನ್ ಬೆಂಗಳೂರು’ ಕಾರ್ಯಕ್ರಮಕ್ಕೆ ಅನುಮತಿ ನೀಡಲು ರಾಜ್ಯ ಗೃಹ ಇಲಾಖೆ ಹಾಗೂ ಪೊಲೀಸ್ ಇಲಾಖೆ ಗೆ ನಿರ್ದೇಶಿಸುವಂತೆ ಕೋರಿ ಸಲ್ಲಿಕೆಯಾಗಿರುವ ತಕರಾರು ಅರ್ಜಿ ವಿಚಾರಣೆ ಹೈಕೋರ್ಟ್ನಲ್ಲಿ ಇಂದು ಬರಲಿದೆ.
‘ಟೈಮ್ಸ್ ಕ್ರಿಯೇಷನ್ಸ್’ ಸಂಚಾಲಕಿ ಎಚ್.ಎಸ್. ಭವ್ಯಾ ಹೈಕೋರ್ಟ್'ಗೆ ತಕರಾರು ಅರ್ಜಿ ಸಲ್ಲಿಸಿದ್ದಾರೆ. ರಾಜ್ಯ ಗೃಹ ಇಲಾಖೆ, ರಾಜ್ಯ ಪೊಲೀಸ್ ಮಹಾನಿರ್ದೇಶಕರು, ನಗರ ಪೊಲೀಸ್ ಆಯುಕ್ತರು ಮತ್ತು ನಗರ ಈಶಾನ್ಯ ವಿಭಾಗದ ಡಿಸಿಪಿಯನ್ನು ಅರ್ಜಿಯಲ್ಲಿ ಪ್ರತಿವಾದಿ ಮಾಡಲಾಗಿದೆ. ಅರ್ಜಿಯು ನ್ಯಾಯಮೂರ್ತಿ ಬಿ.ವೀರಪ್ಪ ಅವರಿರುವ ರಜಾಕಾಲದ ಏಕಸದಸ್ಯ ಪೀಠದ ವಿಚಾರಣೆಗೆ ನಿಗದಿಯಾಗಿದೆ.
ಹೊಸ ವರ್ಷ ಆಚರಣೆ ಪ್ರಯುಕ್ತ ಟೈಮ್ಸ್ ಕ್ರಿಯೇಷನ್, ಡಿ.31ರಂದು ರಾತ್ರಿ ನಗರದ ಹೆಬ್ಬಾಳ-ಕೆ.ಆರ್.ಪುರ ವರ್ತುಲ ರಸ್ತೆಯಲ್ಲಿರುವ ಮಾನ್ಯತಾ ಟೆಕ್ ಪಾರ್ಕ್'ಗೆ ಹೊಂದಿಕೊಂಡ ವೈಟ್ ಆರ್ಕಿಡ್ ಕನ್ವೆನ್'ಷನ್ ಸೆಂಟರ್ ಒಳಾಂಗಣದಲ್ಲಿ ‘ಸನ್ನಿ ನೈಟ್ ಇನ್ ಬೆಂಗಳೂರು’ ಕಾರ್ಯಕ್ರಮ ಆಯೋಜಿಸಿದೆ.
ಅದಕ್ಕಾಗಿ ಅನುಮತಿ ಕೋರಿ ಈಶಾನ್ಯ ವಿಭಾಗದ ಡಿಸಿಪಿಗೆ ಡಿ.1ರಂದು ಮನವಿ ಸಲ್ಲಿಸಲಾಗಿತ್ತು. ಡಿಸಿಪಿ ಕಚೇರಿ ಸಹ ಮೌಖಿಕವಾಗಿ ಅನುಮತಿ ನಿರಾಕರಿಸಿದ್ದರೆ, ಗೃಹ ಸಚಿವ ರಾಮಲಿಂಗಾರೆಡ್ಡಿ ಅವರು ಅನುಮತಿ ನೀಡುವುದಿಲ್ಲ ಎಂದಿದ್ದಾರೆ. ಇದರಿಂದ ಹೈಕೋರ್ಟ್'ಗೆ ಅರ್ಜಿ ಸಲ್ಲಿಸಲಾಗಿದೆ. ಈ ಮಧ್ಯೆ ಕಾರ್ಯಕ್ರಮದಲ್ಲಿ ಭಾಗವಹಿಸುವುದಿಲ್ಲ ಎಂದು ಸನ್ನಿ ಲಿಯೋನ್ ಮಂಗಳವಾರ ತಮ್ಮ ಟ್ವೀಟರ್ ಖಾತೆಯಲ್ಲಿ ಪ್ರಕಟಿಸಿದ್ದಾರೆ.
