ಬಿ.ಕೆ.ಪವಿತ್ರ ಎಂಬುವವರು ಮುಂಬಡ್ತಿ ವಿರುದ್ಧ ಹೋರಾಡಿದ್ದರು. ಸುಪ್ರೀಂ ತೀರ್ಪನ್ನು ಪ್ರಶ್ನಿಸಲು ಸರ್ಕಾರ ನಿರ್ಧರಿಸಿತ್ತು.

ಬೆಂಗಳೂರು(ಮಾ.22): ಸರ್ಕಾರಿ ನೌಕರರಿಗೆ ರಾಜ್ಯ ಸರ್ಕಾರವು ಶಾಕಿಂಗ್ ನ್ಯೂಸ್ ನೀಡಿದೆ. ಮುಂದಿನ 6 ತಿಂಗಳು ಕಾಲ ಮುಂಬಡ್ತಿ ಇರುವುದಿಲ್ಲ.ವಿವಿ,ಆಯೋಗ,ನಿಗಮಮಂಡಳಿ,ಸ್ಥಳೀಯ ಸಂಸ್ಥೆಗಳನ್ನು ಒಳಗೊಂಡು ಸಿವಿಲ್​ ಸೇವೆಯ ಎಲ್ಲಾ ವೃಂದದ ಹುದ್ದೆಗಳ ಮುಂಬಡ್ತಿಯನ್ನು ತಾತ್ಕಾಲಿಕವಾಗಿ ಸರ್ಕಾರ ತಡೆಹಿಡಿದಿದೆ.

ಬಿ.ಕೆ.ಪವಿತ್ರ ಪ್ರಕರಣದಲ್ಲಿ ಸುಪ್ರೀಂಕೋರ್ಟ್​ ತೀರ್ಪು ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಸುತ್ತೋಲೆ ಹೊರಡಿಸಿದೆ. ಬಿ.ಕೆ.ಪವಿತ್ರ ಎಂಬುವವರು ಮುಂಬಡ್ತಿ ವಿರುದ್ಧ ಹೋರಾಡಿದ್ದರು. ಸುಪ್ರೀಂ ತೀರ್ಪನ್ನು ಪ್ರಶ್ನಿಸಲು ಸರ್ಕಾರ ನಿರ್ಧರಿಸಿತ್ತು.