ಬೆಂಗಳೂರು, [ಸೆ.13]: ಕರ್ನಾಟಕ ಪೊಲೀಸರ ಬಹು ವರ್ಷಗಳ ಬೇಡಿಕೆಯನ್ನು ರಾಜ್ಯ ಸರ್ಕಾರ ಈಡೇರಿಸಿದೆ.

 ಪೊಲೀಸರ ವೇತನ ಪರಿಷ್ಕರಣೆಗೆ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಸರ್ಕಾರ ಗ್ರೀನ್ ಸಿಗ್ನಲ್ ನೀಡಿದೆ. ಆಗಸ್ಟ್ 1ರಿಂದ ಜಾರಿಗೆ ಬರುವಂತೆ ವೇತನ ಹೆಚ್ಚಳ ಮಾಡಿ ರಾಜ್ಯ ಸರ್ಕಾರ ಇಂದು [ಶುಕ್ರವಾರ] ಆದೇಶ ಹೊರಡಿಸಿದೆ.

ದಸರಾ ವೇಳೆಗೆ ಪೊಲೀಸರ ಸಂಬಳ ಏರಿಕೆ: ಬೊಮ್ಮಾಯಿ

ಪೊಲೀಸ್ ಪೇದೆ, ಮುಖ್ಯಪೇದೆ, ಎಎಸ್ಐ, ಎಸ್ಐ, ಎಸ್ಪಿ(ನಾನ್ ಐಪಿಎಸ್) ಗಳಿಗೆ ವೇತನ ಹೆಚ್ಚಳಗೊಳಿಸಿ ರಾಜ್ಯ ಸರ್ಕಾರದ ಆದೇಶಿಸಿದೆ. ಈ ಮೂಲಕ ಪೊಲೀಸರಿಗೆ ಬಹು ವರ್ಷಗಳ ಬೇಡಿಕೆ ಈಡೇರಿದಂತಾಗಿದೆ.

ಔರಾದ್ಕರ್‌ ಸಮಿತಿ ವರದಿ ಅನುಷ್ಠಾನದಿಂದಾಗಿ ಪೇದೆಯಿಂದ ಹಿಡಿದು ಡಿವೈಎಸ್‌ಪಿವರೆಗೆ ಔರಾದ್ಕರ್‌ ವರದಿಯಂತೆ ವೇತನ ಪರಿಷ್ಕರಣೆ ಆಗಲಿದೆ. ಜತೆಗೆ ಕಾರಾಗೃಹ ಸಿಬ್ಬಂದಿ, ಅಗ್ನಿಶಾಮಕ ಸಿಬ್ಬಂದಿಯ ವೇತನ ಪರಿಷ್ಕರಿಸುವ ಸಂಬಂಧ ಆರ್ಥಿಕ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲು ಸೂಚನೆ ನೀಡಲಾಗಿದೆ. ಅವರಿಗೂ ಔರಾದ್ಕರ್‌ ವರದಿಯಂತೆ ವೇತನ ಪರಿಷ್ಕರಣೆ ಮಾಡಲಾಗುವುದು ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರು ಸೆ.10ರಂದು ಭರವಸೆ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು.