ಚುನಾವಣಾ ವರ್ಷದಲ್ಲಿ ರಾಜ್ಯ ಸರ್ಕಾರ ಈಗ ಮತಬ್ಯಾಂಕ್ ಕ್ರೋಢೀಕರಣದ ಹೆಜ್ಜೆ ಇಟ್ಟಿದೆ. ಮಾಜಿ ಪ್ರಧಾನಿ ರಾಜೀವ್ ಗಾಂಧಿ ಪೀಠ ಸ್ಥಾಪನೆಗೆ ಮುಂದಾಗಿದೆ. ಈ ಮಧ್ಯೆ ಪೀಠ ಸ್ಥಾಪನೆಯ ಮೂಲಕ ಸಿಎಂ ಸಿದ್ಧರಾಮಯ್ಯ ಕಾಂಗ್ರೆಸ್ ಹೈಕಮಾಂಡ್ ಮನಗೆಲ್ಲಲು ಹೊರಟಿದ್ದಾರಾ ಎಂಬ ಪ್ರಶ್ನೆಯೂ ಉದ್ಭವಿಸಿದೆ.
ಬೆಂಗಳೂರು (ಅ.23): ಚುನಾವಣಾ ವರ್ಷದಲ್ಲಿ ರಾಜ್ಯ ಸರ್ಕಾರ ಈಗ ಮತಬ್ಯಾಂಕ್ ಕ್ರೋಢೀಕರಣದ ಹೆಜ್ಜೆ ಇಟ್ಟಿದೆ. ಮಾಜಿ ಪ್ರಧಾನಿ ರಾಜೀವ್ ಗಾಂಧಿ ಪೀಠ ಸ್ಥಾಪನೆಗೆ ಮುಂದಾಗಿದೆ. ಈ ಮಧ್ಯೆ ಪೀಠ ಸ್ಥಾಪನೆಯ ಮೂಲಕ ಸಿಎಂ ಸಿದ್ಧರಾಮಯ್ಯ ಕಾಂಗ್ರೆಸ್ ಹೈಕಮಾಂಡ್ ಮನಗೆಲ್ಲಲು ಹೊರಟಿದ್ದಾರಾ ಎಂಬ ಪ್ರಶ್ನೆಯೂ ಉದ್ಭವಿಸಿದೆ.
ಚುನಾವಣಾ ವರ್ಷದಲ್ಲಿ ರಾಜ್ಯ ಸರ್ಕಾರ ಮಾಜಿ ಪ್ರಧಾನಿ ರಾಜೀವ ಗಾಂಧಿ ಪೀಠ ಸ್ಥಾಪನೆಗೆ ಹೊರಟಿದೆ. ಹತ್ತು ಕೋಟಿ ರೂ. ವೆಚ್ಚದಲ್ಲಿ ಬೆಂಗಳೂರಿನ ಇನ್ಸ್ಟಿಟ್ಯೂಟ್ ಆಫ್ ಸೋಶಿಯಲ್ ಸೈನ್ಸ್ ಆವರಣದಲ್ಲಿ ಸ್ಥಾಪಿಸುವ ಪ್ರಸ್ತಾವನೆ ಸಿದ್ಧಪಡಿಸಲಾಗಿದ್ದು, ಹಣ ಒದಗಿಸುವಂತೆ ಸಿಎಂ ಸಚಿವಾಲಯ ಗ್ರಾಮೀಣಾಭಿವೃದ್ಧಿ ಇಲಾಖೆಯನ್ನು ಕೋರಿದೆ. ಆದರೆ ನಮ್ಮ ಇಲಾಖೆಗೆ ಅಗತ್ಯವಿರುವಷ್ಟು ಪೂರೈಸುವಷ್ಟು ಹಣ ಇಲ್ಲ ಎಂದು ಪ್ರತಿಕ್ರಿಯಿಸಿರುವ ಗ್ರಾಮೀಣಾಭಿವೃದ್ಧಿ ಇಲಾಖೆ ಕೊನೆಗೂ ಸಿಎಂ ಕಚೇರಿ ಒತ್ತಡದಿಂದಾಗಿ ಹಣಕಾಸು ಇಲಾಖೆ ಒಪ್ಪಿಗೆ ಸೂಚಿಸಿದರೆ ತನ್ನದೇನೂ ಅಭ್ಯಂತರವಿಲ್ಲ ಎಂದು ಹೇಳಿದೆ. ಆದರೆ ಸಿಎಂ ಕಚೇರಿ ಕಳುಹಿಸಿರುವ ಪ್ರಸ್ತಾವನೆಯನ್ನು ಪರಿಶೀಲಿಸಿರುವ ಹಣಕಾಸು ಇಲಾಖೆ ಕಡತವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಕಳುಹಿಸಿದೆ. ಹೀಗಾಗಿ ಈಗ ರಾಜೀವ್ ಗಾಂಧಿ ಪೀಠಕ್ಕೆ ಹಣ ನೀಡಬೇಕಾದ ಜವಾಬ್ದಾರಿ ಈಗ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಹೆಗಲೇರಿದೆ. ಆದರೆ ಈಗಾಗಲೇ ರಾಜ್ಯದಲ್ಲಿ ಮಾಜಿ ಪ್ರಧಾನಿ ದಿ. ರಾಜೀವ್ ಗಾಂಧಿ ಹೆಸರಿನಲ್ಲಿ ಸಾಕಷ್ಟು ಯೋಜನೆಗಳು ಮತ್ತು ಸಂಸ್ಥೆಗಳು ಇರುವುದರಿಂದ ಮತ್ತೆ ಪೀಠ ಸ್ಥಾಪನೆಯ ಅವಶ್ಯಕತೆ ಇದೆಯಾ ಎಂಬ ಪ್ರಶ್ನೆ ಉದ್ಭವಿಸಿದೆ. ಇನ್ನೊಂದೆಡೆ ಚುನಾವಣಾ ವರ್ಷದಲ್ಲಿ ಹೈಕಮಾಂಡ್ ಮನಗೆಲ್ಲಲು ಸಿದ್ಧರಾಮಯ್ಯ ಹೊರಟಿದ್ದಾರಾ ಅನ್ನೋ ಅನುಮಾನ ಕೂಡಾ ಕಾಡ್ತಿದೆ.
