ದಾವಣಗೆರೆ : ರಾಜ್ಯ ಸಮ್ಮಿಶ್ರ ಸರ್ಕಾರಕ್ಕೆ  ಹೆಚ್ಚು ಆಯಸ್ಸಿಲ್ಲ. ಸರ್ಕಾರ ಪತನವಾಗುವುದು ಖಚಿತ ಹೀಗೆಂದು ಹೊನ್ನಾಳಿ ಶಾಸಕ ರೇಣುಚಾರ್ಯ ಮತ್ತೊಮ್ಮೆ ಹೇಳಿದ್ದಾರೆ. 

ನಾನು  ಅಂದೇ ಹೇಳಿದ್ದೆ.  ಈಗಲು ಹೇಳುತ್ತೇನೆ ರಕ್ತದಲ್ಲಿ ಬರೆದುಕೊಡುತ್ತೇನೆ ರಾಜ್ಯದಲ್ಲಿ ಅಸ್ತಿತ್ವದಲ್ಲಿ ಇರುವ ಜೆಡಿಎಸ್ ಹಾಗೂ ಕಾಂಗ್ರೆಸ್  ಸಮ್ಮಿಶ್ರ ಸರ್ಕಾರ ಪತನವಾಗುವುದು ಖಚಿತ ಎಂದಿದ್ದಾರೆ.  

ಲೋಕೋಪಯೋಗಿ ಸಚಿವರಾಗಿರುವ ರೇವಣ್ಣ ಸೂಪರ್ ಸಿಎಂ.  ಬೆಂಗಳೂರು ಉಸ್ತುವಾರಿ‌ ಸಚಿವರಿಗೆ ಗೊತ್ತಿಲ್ಲದೆ ರೇವಣ್ಣ 25 ಸಾವಿರ ಕೋಟಿ ರಸ್ತೆ ಟೆಂಡರ್ ಕರೆಯುತ್ತಾರೆ. ಮೆಟ್ರೋವನ್ನು ಸಿ ಎಂ ಕುಮಾರಸ್ವಾಮಿ ನೋಡಿಕೊಂಡರೆ ಉಳಿದ ರಸ್ತೆ ಹೆದ್ದಾರಿ ಕಾಮಗಾರಿಗಳನ್ನು ರೇವಣ್ಣ ನೋಡಿಕೊಳ್ಳುತ್ತಾರೆ. ಡಿಸಿಎಂ ಪರಮೇಶ್ವರ ನಾಮಕಾವಸ್ತೆಯಾಗಿದ್ದು ಎಲ್ಲಾ ಉಸ್ತುವಾರಿ ರೇವಣ್ಣಗೆ ಸೇರಿದ್ದು ಎಂದು ರೇವಣ್ಣ ಹೇಳಿದರು.  

ಸಿ ಎಂ ಕುಮಾರಸ್ವಾಮಿ ಇಷ್ಟು ದಿನ ತಾಜ್ ವೆಸ್ಟೆಂಡ್ ಹೋಟೆಲ್ ನ ಐಷಾರಾಮಿ ಜೀವನದಲ್ಲಿದ್ದು ಈಗ ಗ್ರಾಮ ವಾಸ್ತವ್ಯ ನಾಟಕವಾಡುತ್ತಿದ್ದಾರೆ. ತಾಜ್ ವೆಸ್ಟೆಂಡ್ ನಲ್ಲಿ ದಿನಕ್ಕೆ 1 ಲಕ್ಷ ರೂ ಬಾಡಿಗೆ ಪಾವತಿ ಮಾಡುತ್ತಿದ್ದ ಸಿ ಎಂ ಗ್ರಾಮ ವಾಸ್ತವ್ಯ ಪ್ರಾರಂಭ ಮಾಡುವುದರಲ್ಲಿ ಸರ್ಕಾರ ಬಿದ್ದು ಹೋಗುತ್ತದೆ.

ಕಾಂಗ್ರೆಸ್ ಶಾಸಕರು ನನ್ನ ಸಂಪರ್ಕದಲ್ಲಿದ್ದು ನಾಲ್ಕು ಮಂದಿ ಆಳ್ವಿಕೆಗೆ ಅವರು ಬೇಸತ್ತಿದ್ದಾರೆ.  ಕಾಂಗ್ರೆಸ್ ಹಾಗೂ ಜೆಡಿಎಸ್ ಕ್ಷೇತ್ರಗಳ ನಡುವೆ ತಾರತಮ್ಯ ಮಾಡಿ ಆಡಳಿತ ಮಾಡುತ್ತಿದ್ದಾರೆ. ಜೆಡಿಎಸ್ ಶಾಸಕರು ಇರುವ ಕ್ಷೇತ್ರಕ್ಕೆ ಸಾವಿರ ಕೋಟಿ ಅನುದಾನ ನೀಡಿದರೆ, ಕಾಂಗ್ರೆಸ್ ಶಾಸಕರು ಇರುವ ಕ್ಷೇತ್ರದಲ್ಲಿ 50 ಕೋಟಿ ಅನುದಾನ ನೀಡಲಾಗುತ್ತಿದೆ ಎಂದು ರೇಣುಕಾಚಾರ್ಯ ಹೇಳಿದರು.