ಜುಲೈ 1ರಿಂದ ಬಿಎಂಟಿಸಿ ವೋಲ್ವೋ ಬಸ್ ದರ ಹೆಚ್ಚಳ ಡಿಸೇಲ್ ದರ ಹೆಚ್ಚಳವಾಗಿರುವ ಹಿನ್ನೆಲೆಯಲ್ಲಿ ಏರಿಕೆ ವೋಲ್ವೋ ಬಸ್ ದರ ಶೇ.3.45ರಿಂದ 26ರವರೆಗೆ ಹೆಚ್ಚಳ

ಬೆಂಗಳೂರು[ಜೂ.30]: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬಿಎಂಟಿಸಿ ವೋಲ್ವೋ ಬಸ್ ಪ್ರಯಾಣ ದರ ಹೆಚ್ಚಿಸಿ ಆದೇಶಿಸಿದೆ.

ವಜ್ರ ಬಸ್ ಟಿಕೆಟ್ ಗೆ ನೀಡಿದ್ದ ರಿಯಾಯಿತಿ ವಾಪಸ್ಸು ಪಡೆದು ದರ ಏರಿಸಿಲಾಗಿದ್ದು ಜುಲೈ 1 ರಿಂದ ದರಗಳು ಹೆಚ್ಚಳಗೊಳ್ಳಲಿದೆ. ಡಿಸೇಲ್ ದರ ಹೆಚ್ಚಳವಾಗಿರುವ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಸರ್ಕಾರದ ಆದೇಶದಿಂದ ವೋಲ್ವೋ ಬಸ್ ದರ ಶೇ.3.45ರಿಂದ 26ರವರೆಗೆ ಹೆಚ್ಚಳವಾಗಲಿದೆ.

ಹೊಸ ವರ್ಷದ ಉಡುಗೊರೆಯಾಗಿ ವಜ್ರ ಬಸ್ ದರವನ್ನು ವಿವಿಧ ಹಂತದಲ್ಲಿ ಶೇ. 29 ರಷ್ಟು ರಿಯಾಯಿತಿ ನೀಡಲಾಗಿತ್ತು. ಇದೀಗ ಮತ್ತೆ ಟಿಕೆಟ್ ದರವನ್ನು ವಿವಿಧ ಹಂತದಲ್ಲಿ ಶೇ. 16.89 ರಷ್ಟು ಏರಿಸಿಲಾಗಿದೆ.