ರೈತರ ಜಮೀನಿಗೆ ನೀರು ಹರಿಸಲು ಸಿಎಂ ಸಿದ್ದರಾಮಯ್ಯ, ಜಲಸಂಪನ್ಮೂಲ ಇಲಾಖೆಗೆ ಆದೇಶಿಸಿದ್ದಾರೆ

ಬೆಂಗಳೂರು(ಸೆ.07): ತಮಿಳುನಾಡಿಗೆ ಕಾವೇರಿ ನೀರು ಹರಿಸಿರುವುದನ್ನ ಖಂಡಿಸಿ ರೈತರು ನಡೆಸುತ್ತಿರುವ ಉಗ್ರ ಹೋರಾಟಕ್ಕೆ ಕೊನೆಗೂ ಸರ್ಕಾರ ತಲೆಬಾಗಿದೆ. ಕಾವೇರಿ ಕೊಳ್ಳದ ರೈತರ ಬೆಳೆಗಳಿಗೆ ನೀರು ಹರಿಸಲು ಸರ್ಕಾರದ ನಿರ್ಧರಿಸಿದೆ.

ಇಂದು ರಾತ್ರಿ ಅಥವಾ ನಾಳೆ ರೈತರ ಜಮೀನಿಗೆ ನೀರು ಬಿಡುಗಡೆ ಮಾಡಲಾಗುತ್ತದೆ. ರೈತರ ಜಮೀನಿಗೆ ನೀರು ಹರಿಸಲು ಸಿಎಂ ಸಿದ್ದರಾಮಯ್ಯ, ಜಲಸಂಪನ್ಮೂಲ ಇಲಾಖೆಗೆ ಆದೇಶಿಸಿದ್ದಾರೆ. ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ಸಿಎಂ ಈ ತೀರ್ಮಾನ ಕೈಗೊಂಡಿದ್ದಾರೆ. ಕಾವೇರಿ ಕೊಳ್ಳದ 2.92 ಲಕ್ಷ ಎಕರೆ ಬೆಳೆಗೆ ನೀರು ಸಿಗಲಿದೆ.