14 ಶಾಸಕರು ದೋಸ್ತಿ ಸರಕಾರಕ್ಕೆ ಕೈ ಕೊಟ್ಟು ಹೊರನಡೆದಿರುವಾಗಲೆ ಇನ್ನು 9 ಜನ ಶಾಸಕರು ರಾಜೀನಾಮೆಗೆ ಸಿದ್ಧತೆ ಮಾಡಿಕೊಂಡಿದ್ದಾರೆ.
ಬೆಂಗಳೂರು[ಜು. 07] ಈಗಾಗಲೇ 14 ಜನ ಶಾಸಕರು ದೋಸ್ತಿ ಪಾಳಯದಿಂದ ಹೊರ ನಡೆದಿದ್ದಾರೆ. ದೋಸ್ತಿ ಸರಕಾರ ಅಲ್ಪ ಮತಕ್ಕೆ ಕುಸಿಯುವ ಭೀತಿ ಎದುರಿಸುತ್ತಿದ್ದು ಸೋಮವಾರ ಮತ್ತೆ 10 ಜನ ಶಾಸಕರು ರಾಜೀನಾಮೆ ನೀಡಲಿದ್ದಾರೆ ಎಂಬ ಮಾತುಗಳು ಗಟ್ಟಿಯಾಗುತ್ತಿವೆ.
ಹಾಗಾದರೆ ರಾಜೀನಾಮೆ ನೀಡಲಿರುವ 10 ಶಾಸಕರು ಯಾರು? ರಾಜೀನಾಮೆ ನೀಡಲಿರುವ ಸಂಭಾವ್ಯರ ಪಟ್ಟಿ ಇಲ್ಲಿದೆ..
ಶನಿವಾರ ಏನೆಲ್ಲಾ ಆಗೋಯ್ತು! 14 ಶಾಸಕರ ರಾಜೀನಾಮೆ
1. ಎಸ್.ಎನ್ ಸುಬ್ಬಾರೆಡ್ಡಿ -ಬಾಗೇಪಲ್ಲಿ [ಕಾಂಗ್ರೆಸ್]
2. ಅಂಜಲಿ ನಿಂಬಾಳ್ಕರ್- ಖಾನಾಪುರ [ಕಾಂಗ್ರೆಸ್]
3. ಶ್ರೀಮಂತ ಪಾಟೀಲ್-ಕಾಗವಾಡ [ಕಾಂಗ್ರೆಸ್]
4. ಅನಿಲ್ ಚಿಕ್ಕಮಾದು-ಎಚ್.ಡಿ.ಕೋಟೆ [ಕಾಂಗ್ರೆಸ್]
5. ಗಣೇಶ್ ಹುಕ್ಕೇರಿ- ಚಿಕ್ಕೋಡಿ -ಸದಲಗಾ [ಕಾಂಗ್ರೆಸ್]
6. ಡಾ. ಕೆ.ಸುಧಾಕರ್-ಚಿಕ್ಕಬಳ್ಳಾಪುರ [ಕಾಂಗ್ರೆಸ್]
7. ಎಷ್.ಎನ್.ನಾರಾಯಣಸ್ವಾಮಿ -ಬಂಗಾರಪೇಟೆ [ಕಾಂಗ್ರೆಸ್]
8. ನಾಗೇಂದ್ರ- ಬಳ್ಳಾರಿ [ಕಾಂಗ್ರೆಸ್]
9. ನಿಸರ್ಗ ನಾರಾಯಣಸ್ವಾಮಿ-ದೇವನಹಳ್ಳಿ[ಜೆಡಿಎಸ್]
10. ಕೆ.ಶ್ರೀನಿವಾಸ ಗೌಡ-ಕೋಲಾರ[ಜೆಡಿಎಸ್]
