ಕರ್ನಾಟಕದಲ್ಲಿ ಅರಣ್ಯ ವಿಸ್ತಾರ: 1101 ಚದರ ಕಿ.ಮೀ. ಏರಿಕೆ

Karnataka forest cover grew Up
Highlights

ಕಾಡು ಕಡಿಮೆಯಾಗುತ್ತಿದೆ, ಕಾಂಕ್ರೀಟ್‌ ಕಾಡು ಹೆಚ್ಚಾಗುತ್ತಿದೆ, ಇದರಿಂದ ತಾಪಮಾನ ಏರುತ್ತಿದೆ ಎಂಬ ದೂರು ಸರ್ವೇಸಾಮಾನ್ಯ. ಆದರೆ ಇದಕ್ಕೆ ತದ್ವಿರುದ್ಧವಾದ ವರದಿಯೊಂದು ಬಂದಿದೆ. ಕಳೆದ ಎರಡು ವರ್ಷಗಳಲ್ಲಿ ದೇಶದಲ್ಲಿ ಅರಣ್ಯ ಪ್ರಮಾಣ 6778 ಚದರ ಕಿ.ಮೀ.ಯಷ್ಟುಹೆಚ್ಚಾಗಿದೆ.

ಡೆಹ್ರಾಡೂನ್‌: ಕಾಡು ಕಡಿಮೆಯಾಗುತ್ತಿದೆ, ಕಾಂಕ್ರೀಟ್‌ ಕಾಡು ಹೆಚ್ಚಾಗುತ್ತಿದೆ, ಇದರಿಂದ ತಾಪಮಾನ ಏರುತ್ತಿದೆ ಎಂಬ ದೂರು ಸರ್ವೇಸಾಮಾನ್ಯ. ಆದರೆ ಇದಕ್ಕೆ ತದ್ವಿರುದ್ಧವಾದ ವರದಿಯೊಂದು ಬಂದಿದೆ. ಕಳೆದ ಎರಡು ವರ್ಷಗಳಲ್ಲಿ ದೇಶದಲ್ಲಿ ಅರಣ್ಯ ಪ್ರಮಾಣ 6778 ಚದರ ಕಿ.ಮೀ.ಯಷ್ಟುಹೆಚ್ಚಾಗಿದೆ.

ಈ ಏರಿಕೆಗೆ ಕರ್ನಾಟಕ ಎರಡನೇ ಅತಿದೊಡ್ಡ ಕೊಡುಗೆ ನೀಡಿದೆ. ಕರ್ನಾಟಕದಲ್ಲಿ 1101 ಚದರ ಕಿ.ಮೀ.ಯಷ್ಟುಅರಣ್ಯ ವಿಸ್ತಾರಗೊಂಡಿದ್ದರೆ, ದೇಶದಲ್ಲೇ ಅತಿ ಹೆಚ್ಚು ಆಂಧ್ರಪ್ರದೇಶದಲ್ಲಿ 2141 ಚದರ ಕಿ.ಮೀ.ಯಷ್ಟುಅರಣ್ಯ ಹೆಚ್ಚಾಗಿದೆ. ಕೇರಳದಲ್ಲಿ 1043 ಚದರ ಕಿ.ಮೀ.ಯಷ್ಟುಅರಣ್ಯ ವಿಸ್ತೀರ್ಣವಾಗಿದೆ.

ಭಾರತೀಯ ಅರಣ್ಯ ಸಮೀಕ್ಷೆ (ಎಫ್‌ಎಸ್‌ಐ)ಯಲ್ಲಿ ಈ ಅಂಶ ತಿಳಿದುಬಂದಿದೆ. ಸದ್ಯ ದೇಶಾದ್ಯಂತ 8,02,088 ಚದರ ಕಿ.ಮೀ. ಅರಣ್ಯವಿದ್ದು, ಇದು ಒಟ್ಟು ಭೌಗೋಳಿಕ ವಿಸ್ತೀರ್ಣದ ಶೇ.24.39ರಷ್ಟಾಗಿದೆ. 15 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಒಟ್ಟು ಭೌಗೋಳಿಕ ವಿಸ್ತೀರ್ಣದ ಶೇ.33ಕ್ಕಿಂತ ಅಧಿಕ ಅರಣ್ಯವಿದೆ ಎಂದು ಎಫ್‌ಎಸ್‌ಐ ಮಹಾನಿರ್ದೇಶಕ ಸೈಬಲ್‌ ದಾಸ್‌ಗುಪ್ತಾ ತಿಳಿಸಿದ್ದಾರೆ.

 

loader