ಬೆಂಗಳೂರು [ಜು.20] :  ಶನಿವಾರ ನಿಗದಿತ ಅವಧಿಯೊಳಗೆ ಬಹುಮತ ಸಾಬೀತು ಪಡಿಸುವಂತೆ ರಾಜ್ಯಪಾಲ ವಜೂಭಾಯಿ ವಾಲಾ ಅವರು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಗೆ ಎರಡೆರಡು ಬಾರಿ ನಿರ್ದೇಶನ ನೀಡಿದ ಹೊರತಾಗ್ಯೂ ಸಭಾಧ್ಯಕ್ಷ ಕೆ.ಆರ್.ರಮೇಶ್ ಕುಮಾರ್ ಕಲಾಪವನ್ನು ಸೋಮ ವಾರಕ್ಕೆ ಮುಂದೂಡಿದರು. 

1ಸೋಮವಾರಕ್ಕೆ ಕಲಾಪ ಮುಂದೂಡಿಕೆ ಆಗಿರುವುದರಿಂದ ಆ ದಿನದ ವರೆಗೂ ತಾಳ್ಮೆಯಿಂದ ಕಾದು ನೋಡಬಹುದು

2 ಬಹುಮತ ಸಾಬೀತಿಗೆ 2 ಬಾರಿ ನೀಡಿದ ಆದೇಶವನ್ನೂ ಲೆಕ್ಕಿಸದ ಬಗ್ಗೆ ಮತ್ತೆ ರಾಜ್ಯಪಾಲರ ಮೊರೆ ಹೋಗಬಹುದು

3 ರಾಜ್ಯಪಾಲರ ಆದೇಶವನ್ನೂ ಸರ್ಕಾರ ಪಾಲಿಸುತ್ತಿಲ್ಲ ಎಂದು ದೂರು ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಬಹುದು

4 ಮುಖ್ಯಮಂತ್ರಿಗಳ ನಡೆಯನ್ನು ವಿರೋಧಿಸಿ ಇನ್ನೆರಡು ದಿನಗಳ ಕಾಲ ಪ್ರತಿಭಟನೆ, ಧರಣಿ ಆಯೋಜಿಸಬಹುದು