ಬೆಂಗಳೂರು[ಜು. 21]  ಅತೃಪ್ತ 15 ಅತೃಪ್ತ ಶಾಸಕರ ಜತೆ ಇಬ್ಬರು ಪಕ್ಷೇತರ ಶಾಸಕರು ಸುಪ್ರೀಂ ಮೊರೆ ಹೋಗಿದ್ದಾರೆ. ಸೋಮವಾರವೇ ಸಿಎಂ ವಿಶ್ವಾಸಮತ ಪೂರ್ಣಗೊಳಿಸಲು ಆದೇಶ ಕೋರಿ ಅರ್ಜಿ ಹಾಕಿದ್ದಾರೆ.

ಪಕ್ಷೇತರರು ಅಡ್ವೋಕೇಟ್ ದೀಕ್ಷಾ ರೈ ಎನ್ನುವವರ ಮೂಲಕ ಸುಪ್ರೀಂಗೆ ಮನವಿ ಸಲ್ಲಿಸಿದ್ದು ರಾಜ್ಯದಲ್ಲಿ ಉಂಟಾಗಿರುವ ಸಾಂವಿಧಾನಿಕ ಬಿಕ್ಕಟ್ಟಿಗೆ ಅಂತ್ಯ ಹಾಡಬೇಕು ಎಂದು ಮನವಿ ಮಾಡಿದ್ದಾರೆ.

ರೆ. ಅಲ್ಲದೆ ಸೋಮವಾರ ಸಂಜೆಯೊಳಗೆ ಬಹುಮತವಿಲ್ಲದ ಎಚ್.ಡಿ.. ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರ ತಾವು ಸದನದಲ್ಲಿ ವಿಶ್ವಾಸಮತ ಯಾಚನೆ ಮಾಡಬೇಕು. ವಿಶ್ವಾಸಮತ ಸಾಬೀತು ಪಡಿಸಬೇಕೆಂದು ಅವರು ಕೇಳಿದ್ದಾರೆ. 

ಕಾಲಮಿತಿಯಲ್ಲಿ ದೋಸ್ತಿ ಸರ್ಕಾರ ವಿಶ್ವಾಸ ಮತ ಕೇಳುತ್ತಿಲ್ಲ. ಕಾರಣಗಳನ್ನು ನೀಡುತ್ತ ದಿನ ಕಳೆಯುತ್ತಿದೆ ಎಂದು ಆರೋಪಿಸಿದ್ದಾರೆ.