ಬೆಂಗಳೂರು[ಆ. 11] ಪ್ರವಾಹಕ್ಕೆ ಸಿಲುಕಿ ನಾಪತ್ತೆಯಾದವರ ಪತ್ತೆಗೆ ಏರ್‌ ಟೆಲ್ ನೆರವು ಮುಂದಾಗಿದೆ, 1948 ಟೋಲ್ ಫ್ರೀ ಸಂಖ್ಯೆಗೆ  ಕರೆ ಮಾಡಿದರೆ ಸಂಸ್ಥೆ ನಿಮ್ಮ ನೆರವಿಗೆ ನಿಲ್ಲುತ್ತದೆ.  ಹಾಗಾದರೆ ಯಾವೆಲ್ಲ ಸ್ಟೆಪ್ ಗಳನ್ನು ಫಾಲೋ ಮಾಡಬೇಕು?

ಹಂತ 1: ನಿಮ್ಮ ಏರ್ ಟೆಲ್ ನಂಬರ್ ನಿಂದ ಕರೆಮಾಡಬೇಕು. ಏರ್ ಟೆಲ್ ಸಂಖ್ಯೆ ಇಲ್ಲವಾದರೆ 9108445678ಗೆ ಕರೆ ಮಾಡಬೇಕು.

ಹಂತ 2: ಕಳೆದು ಹೋದ ವ್ಯಕ್ತಿಯ ಏರ್ ಟೆಲ್  ಸಂಖ್ಯೆಯನ್ನು ತಿಳಿಸಬೇಕು

ಹಂತ 3: ಮೂರು ಗಂಟೆ ಒಳಗೆ ನಿಮ್ಮ ಮೊಬೈಲ್ ಗೆ ಸಂದೇಶ ಒಂದು ಬರಲಿದ್ದು ಮಿಸ್ ಆದ ವ್ಯಕ್ತಿಯ ಕೊನೆಯ ಲೋಕೇಶನ್ ಅನ್ನು ಸಂಸ್ಥೆ ಕಳುಹಿಸಿ ಕೊಡಲಿದೆ.