ಕೊಡಗಿನ ದುಬಾರೆಯಲ್ಲಿನ 4 ಮತ್ತಿಗೋಡಿನ ಮೂರು ಮತ್ತು ಹುಣಸೂರಿನ 3 ಸಾಕಾನೆಗಳನ್ನು ಉತ್ತಾಖಂಡ್'ಗೆ ರವಾನೆ ಮಾಡಲು ಸಿದ್ದತೆ ನಡೆಸಲಾಗಿದ್ದು,  ಇನ್ನು ಒಂದು ವಾರದ ಒಳಗಾಗಿ ರವಾನೆಯಾಗುವ ಸಾಧ್ಯತೆಯಿದೆ.

ಮಡಿಕೇರಿ(ಫೆ.07): ರಾಜ್ಯ ಸರ್ಕಾರ ಕಾಡಿನ ಆನೆಗಳನ್ನು ಬೇರೆ ರಾಜ್ಯಗಳಿಗೆ ನೀಡಲು ಹೊರಟಿದೆ,ಕಳೆದ ಎರಡು ವರ್ಷಗಳಿಂದ ನಡೆಯುತ್ತಿರುವ ಪ್ರತಿಫಲ ಸಲುವಾಗಿ ರಾಜ್ಯದ ಕೊಡಗು ಮತ್ತು ಮೈಸುರು ಭಾಗದ ಒಟ್ಟು 10 ಆನೆಗಳನ್ನು ಉತ್ತರಖಂಡ್ ಗೆ ಸಾಗಿಸಲು ಸಕಲ ಸಿದ್ದತೆ ನಡೆಸಿದೆ.

ಕೊಡಗಿನ ದುಬಾರೆಯಲ್ಲಿನ 4 ಮತ್ತಿಗೋಡಿನ ಮೂರು ಮತ್ತು ಹುಣಸೂರಿನ 3 ಸಾಕಾನೆಗಳನ್ನು ಉತ್ತಾಖಂಡ್'ಗೆ ರವಾನೆ ಮಾಡಲು ಸಿದ್ದತೆ ನಡೆಸಲಾಗಿದ್ದು, ಇನ್ನು ಒಂದು ವಾರದ ಒಳಗಾಗಿ ರವಾನೆಯಾಗುವ ಸಾಧ್ಯತೆಯಿದೆ. ಇಂದು ಉತ್ತರಖಂಡ್'ನ ಅರಣ್ಯ ಇಲಾಖೆ ಅಧಿಕಾರಿಗಳು ಮತ್ತಿಗೋಡು ಅರಣ್ಯ ವಲಯದ ಸಾಕಾನೆ ಶಿಬಿರಕ್ಕೆ ಭೇಟಿ ನೀಡಿದ ಏಳು ಮಂದಿಯ ತಂಡ ಸ್ಥಳೀಯ ವೈದ್ಯಾಧಿಕಾರಿ ಡಾ. ಉಮಾಶಂಕರ್ ನೇತೃತ್ವದದಲ್ಲಿ ತಪಾಸಣೆ ನಡೆಸಲಾಗುತ್ತಿದೆ. ಉತ್ತರ ಖಂಡ್'ನ ಅರಣ್ಯಧಿಕಾರಿ ಅಮಿತ್ ಶರ್ಮಾ ಇದರ ನೇತೃತ್ವ ವಹಿಸಿಕೊಂಡಿದ್ದಾರೆ. ಕರ್ನಾಟಕದಲ್ಲಿ ಸಾಕಾನೆಗಳು ಯಾವುದೇ ಹವಮಾನಕ್ಕೆ ಹೊಂದಿಕೊಳ್ಳುವಂತೆ ಒಗ್ಗಿಕೊಳುತ್ತವೆ ಎನ್ನುವ ಕಾರಣಕ್ಕೆ ಉತ್ತರ ಖಂಡ್'ನ ಅರಣ್ಯ ಇಲಾಖೆ ಕೊಡಗಿನಲ್ಲಿರುವ ಅತೀ ಆನೆ ಶಿಭಿರಕ್ಕೆ ಎರಡು ವರ್ಷಗಳ ಹಿಂದೆಯೇ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು,ಇಂದು ಅಂತಿಮ ವೈದಕೀಯ ಪರೀಕ್ಷ ನಡೆಸಲಾಗುತ್ತಿದೆ.ಅಂದಹಾಗೆ ವೈದರೀಗೆ ತಪಾಸಣೆ ನಡೆಸಲು ಕ್ಯಾಪ್ಟನ್ ಅಭಿಮನ್ಯ ಸಾಥ್ ನೀಡುತ್ತಿದ್ದಾನೆ.